alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯೋ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ

Olympics park

ರಿಯೋ ಡಿ ಜನೈರೋ: ಜಾಗತಿಕ ಕ್ರೀಡಾಹಬ್ಬ ಎಂದೇ ಕರೆಯಲಾಗುವ ಒಲಿಂಪಿಕ್ಸ್ ಗೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 4.30ಕ್ಕೆ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿರುವ ಮರಕಾನಾ ಕ್ರೀಡಾಂಗಣದಲ್ಲಿ ವೈಭವದೊಂದಿಗೆ ಕ್ರೀಡಾಹಬ್ಬಕ್ಕೆ ಚಾಲನೆ ದೊರೆಯಲಿದೆ.

ಉದ್ಘಾಟನಾ ಸಮಾರಂಭ ಸರಳವಾಗಿ ವೈಭವಯುತವಾಗಿ ನಡೆಯಲಿದ್ದು, ಬ್ರೆಜಿಲ್ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಯಾ ದೇಶಗಳ ಕ್ರೀಡಾಪಟುಗಳು, ತಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಪೆರೇಡ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಸಮಾರಂಭದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಕುತೂಹಲದ ಕ್ಷಣಕ್ಕಾಗಿ ಕಾಯತೊಡಗಿದ್ದಾರೆ. ಬ್ರೆಜಿಲ್ ನಿರ್ದೇಶಕ ಫೆರ್ನಾಂಡೋ ಮೆಲ್ ರೆಲೆಸ್ ನಿರ್ದೇಶನದಲ್ಲಿ 6,000 ನೃತ್ಯ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಇದರೊಂದಿಗೆ ಬ್ರೆಜಿಲ್ ನ ಸೂಪರ್ ಮಾಡೆಲ್ ಗಳು ಆಕರ್ಷಣೆಯ ಕೇಂದ್ರ ಬಿಂದುವಾಗಲಿದ್ದಾರೆ. ಚೀನಾದ ಬೀಜಿಂಗ್ ಒಲಿಂಪಿಂಕ್ ನಲ್ಲಿ ಚಿನ್ನದ ಪದಕ ಗಳಿಸಿದ್ದ ಅಭಿನವ್ ಬಿಂದ್ರಾ ಭಾರತದಿಂದ ಆಗಮಿಸಿರುವ 118 ಕ್ರೀಡಾಪಟುಗಳ ತಂಡವನ್ನು ಪಥಸಂಚಲನದಲ್ಲಿ ಮುನ್ನಡೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...