alex Certify
ಕನ್ನಡ ದುನಿಯಾ       Mobile App
       

Kannada Duniya

IPL ಹರಾಜು ಪ್ರಕ್ರಿಯೆಗೆ ರಿಚರ್ಡ್ ಮ್ಯಾಡ್ಲಿ ಫಿದಾ…!

ಐಪಿಎಲ್ ಹರಾಜು ಅಂದಾಕ್ಷಣ ನೆನಪಾಗೋದು ರಿಚರ್ಡ್ ಮ್ಯಾಡ್ಲಿ. ಬ್ರಿಟನ್ ನ ಖ್ಯಾತ ಹರಾಜುಗಾರ ರಿಚರ್ಡ್ ಪ್ರತಿವರ್ಷ ಐಪಿಎಲ್ ಆಕ್ಷನ್ ನಡೆಸಿಕೊಡ್ತಾರೆ. ಆದ್ರೆ ಈ ರೀತಿ ಆಟಗಾರರನ್ನು ಹರಾಜು ಹಾಕುವ ವಿನೂತನ ಪ್ರಕ್ರಿಯೆಯ ಶ್ರೇಯಸ್ಸು ಮಾತ್ರ ಲಲಿತ್ ಮೋದಿಗೆ ಸಲ್ಲಬೇಕು ಎನ್ನುತ್ತಾರೆ ಅವರು.

2008ರಲ್ಲಿ ನಡೆದ ಮೊದಲ ಐಪಿಎಲ್ ಹರಾಜು ಪ್ರಕ್ರಿಯೆ ಅತ್ಯಂತ ಸ್ಮರಣೀಯ ಅಂತಾ ರಿಚರ್ಡ್ ನೆನಪಿಸಿಕೊಳ್ತಾರೆ. ಹರಾಜಿನ ದಿನ ಏನಾಗತ್ತೆ ಅನ್ನೋದು ಫ್ರಾಂಚೈಸಿಗಳು, ಆಟಗಾರರು, ಸಂಘಟಕರು ಯಾರಿಗೂ ಗೊತ್ತಿರೋದಿಲ್ಲ, ಎಲ್ಲವೂ ಆಕಸ್ಮಿಕ ಎನ್ನುತ್ತಾರೆ ಅವರು.

ಇಂದು 11ನೇ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ಸಹಜವಾಗಿಯೇ ರಿಚರ್ಡ್ ಮ್ಯಾಡ್ಲಿ ಕೂಡ ಉತ್ಸುಕರಾಗಿದ್ದಾರೆ. ಐಪಿಎಲ್ ಅನ್ನೋದು ಇಷ್ಟು ದೊಡ್ಡ ಈವೆಂಟ್ ಆಗಬಹುದು ಅನ್ನೋ ಕಲ್ಪನೆ 2008ರಲ್ಲಿ ಯಾರಿಗೂ ಇರಲಿಲ್ಲ ಅಂತಾ ಮ್ಯಾಡ್ಲಿ ಹೇಳಿದ್ದಾರೆ. ಈ ವರ್ಷದ ಹರಾಜು ಅತ್ಯಂತ ಕುತೂಹಲಕರವಾಗಿರಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...