alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯನ್ನು ಅವಮಾನಿಸಿದ್ದಕ್ಕಾಗಿ ಬೆಲೆ ತೆತ್ತ ಬಾಂಗ್ಲಾ ದೇಶಿಯರು

dhoni head 123

ಬಾಂಗ್ಲಾ ದೇಶದ ಕ್ರಿಕೆಟ್ ಅಭಿಮಾನಿಗಳು ತಮ್ಮ ಅತಿರೇಕದ ನಡವಳಿಕೆಯಿಂದಾಗಿ ಹಲವು ಬಾರಿ ಆಕ್ರೋಶಕ್ಕೆ ಒಳಗಾಗಿದ್ದಾರೆ. ತಮ್ಮ ತಂಡದ ಕುರಿತು ಅಂಧಾಭಿಮಾನ ಹೊಂದಿರುವ ಇವರುಗಳು ಇತರೆ ದೇಶದ ಆಟಗಾರರನ್ನು ಅವಮಾನಿಸಲು ಹಿಂಜರಿಯುವುದಿಲ್ಲ.

ಏಷ್ಯಾ ಕಪ್ ಟಿ20 ಪಂದ್ಯದ ವೇಳೆ ಪಾಕಿಸ್ತಾನ ತಂಡ ಬಾಂಗ್ಲಾದ ವಿರುದ್ದ ಪರಾಭವಗೊಂಡ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡುವಾಗ ಪಾಕಿಸ್ತಾನದ ಕಟ್ಟಾ ಅಭಿಮಾನಿ ಮಹಮ್ಮದ್ ಬಶೀರ್ ಅವರಿಗೆ ಬಲವಂತವಾಗಿ ಬಾಂಗ್ಲಾ ಧ್ವಜವನ್ನು ಹಾಕುವ ಮೂಲಕ ಕಣ್ಣೀರಿಡುವಂತೆ ಮಾಡಲಾಗಿತ್ತು.

ಭಾರತದ ವಿರುದ್ದದ ಬಾಂಗ್ಲಾ ಪಂದ್ಯಕ್ಕೂ ಮುನ್ನ ಧೋನಿಯವರ ರುಂಡವನ್ನು ಬಾಂಗ್ಲಾ ಬೌಲರ್ ತಸ್ಕೀನ್ ಅಹ್ಮದ್ ಕೈಯ್ಯಲ್ಲಿಡಿದಿರುವಂತೆ ಫೋಟೋಶಾಪ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲೆಂಬಂತೆ Kerala Cyber Warriors ಎಂಬ ಗ್ರೂಪ್, ಬಾಂಗ್ಲಾ ದೇಶದ ಸರ್ಕಾರಿ ವೆಬ್ ಸೈಟ್ ಸೇರಿದಂತೆ ಅಲ್ಲಿನ ಹಲವು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದೆ. ತಾವು ಹ್ಯಾಕ್ ಮಾಡಿರುವ ವೆಬ್ ಸೈಟ್ ಗಳಲ್ಲಿ ಧೋನಿ ಭಾವಚಿತ್ರ ಹಾಕಿ, ನಮ್ಮ ತಂಡದ ಮುಂದೆ ಬಾಂಗ್ಲಾ ಕ್ರಿಕೆಟ್ ತಂಡ ಲೆಕ್ಕಕ್ಕೇ ಇಲ್ಲ ಎಂಬ ಸಂದೇಶವನ್ನು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...