alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪುತ್ರಿಯ ಹಿಂದೆ ಬಿದ್ದಿದ್ದವನು ಈಗ ಹೇಳಿದ್ದೇನು…?

ಕ್ರಿಕೆಟ್ ಲೋಕದ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ತಮಗೆ ಸಂಬಂಧವೇ ಇಲ್ಲದ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಸಾರಾ ಪುತ್ರಿಯ ಹಿಂದೆ ಬಿದ್ದಿದ್ದ ಪಶ್ಚಿಮ ಬಂಗಾಳದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ತನ್ನನ್ನು ವಿವಾಹವಾಗದಿದ್ದರೆ ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿದ್ದಾನೆ.

ಸಾರಾ ತೆಂಡೂಲ್ಕರ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದ ಮುಂಬೈ ಮೂಲದ ಟೆಕ್ಕಿಯೊಬ್ಬ ಅದರಲ್ಲಿ ಎನ್ ಸಿ ಪಿ ಮುಖಂಡ ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾನೆ.

ಈ ಮಧ್ಯೆ ತನ್ನನ್ನು ವಿವಾಹವಾಗದಿದ್ದರೆ ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಪಶ್ಚಿಮ ಬಂಗಾಳದ ದೇಬ್ ಕುಮಾರ್ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ಹೇಳಿಕೆ ನೀಡಿದ್ದಾನೆ. 2011 ರಿಂದಲೇ ತಾನು ಸಾರಾಳನ್ನು ಪ್ರೀತಿಸುತ್ತಿರುವುದಾಗಿ ಬಡಬಡಿಸಿದ್ದಾನೆ. ವಿಪರ್ಯಾಸವೆಂದರೆ ಆಗ ಸಾರಾಗಿನ್ನೂ 13 ವರ್ಷವೆಂಬುದು ಗಮನಾರ್ಹ.

ಸಚಿನ್ ತೆಂಡೂಲ್ಕರ್ ಅವರ ಕಛೇರಿಗೆ ಫೋನ್ ಮಾಡಿದ ವೇಳೆ ಅವರ ಸಹಾಯಕರ ಬಳಿಯೂ ಈ ವಿಷಯ ಹೇಳಿದ್ದಾಗಿ ಆತ ತಿಳಿಸಿದ್ದಾನೆ. ಹುಚ್ಚು ಪ್ರೀತಿಗೆ ಬಿದ್ದಿದ್ದ ಈತ ತನ್ನ ಕೈ ಮೇಲೆ Deb and Sara ಎಂದು ಬರೆಸಿಕೊಂಡಿರುವುದು ಕಂಡು ಬಂದಿದೆ. ಹಲವು ಬಾರಿ ಸಾರಾಳನ್ನು ಈತ ಹಿಂಬಾಲಿಸಿಕೊಂಡು ಹೋಗಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿರುವ ದೇಬ್ ಕುಮಾರ್ ಕುಟುಂಬಸ್ಥರು ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿಸಿದ್ದಾರೆ. 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...