alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರು ಸುರಕ್ಷಿತವಾಗಿರುವುದನ್ನು ತಿಳಿದ ಬಳಿಕ ಸಜನ್ ನಿರಾಳ

ಜಕಾರ್ತದಲ್ಲಿ ಭಾರತಕ್ಕೆ ಪದಕ ತರುವ ಆಸೆಯಿಂದ ಆ ಈಜು ಪಟು ನೀರಿಗೆ ಇಳಿದ್ರೆ, ಮನಸ್ಸು ಮಾತ್ರ ಕೇರಳದತ್ತ ಸೆಳೆಯುತ್ತಿತ್ತು. ಕೇರಳ ಮೂಲದ ಈಜು ಪಟು ಸಜನ್ ಪ್ರಕಾಶ್, 200 ಮೀಟರ್ ಬಟರ್ ಫ್ಲೈ ಫೈನಲ್‍ ನಲ್ಲಿ ನಿರಾಸೆ ಅನುಭವಿಸಿದ್ರು.

ಈಜು ಕೊಳದಿಂದ ಹೊರ ಬರುತ್ತಿದ್ದಂತೆ ಸಜನ್, ಪೋಷಕರಿಗೆ ಕಾಲ್ ಮಾಡಲು ಮುಂದಾಗಿದ್ದಾರೆ. ಫೋನ್ ಕನೆಕ್ಟ್ ಆಗದಾಗ ಸಜನ್ ಗೆ ಆತಂಕ ಶುರುವಾಯಿತು. ಕೇರಳದಲ್ಲಿನ ಪ್ರವಾಹದಲ್ಲಿ ಸಜನ್ ಪೋಷಕರು ಸಿಕ್ಕಿ ಹಾಕಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸಜನ್ ಗೆ ನಿದ್ದೆ ಬರಲಿಲ್ಲ. ಸಜನ್ ಗೆ, ಸಂಬಂಧಿ ಕಾಲ್ ಮಾಡಿ ಕುಟುಂಬಸ್ಥರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ ಮೇಲೆ ಸಮಾಧಾನವಾಗಿದೆ.

ಒತ್ತಡದಲ್ಲಿ ಪ್ರದರ್ಶನ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ. ಹೀಗಾಗಿ ಏಷ್ಯನ್ ಗೇಮ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಯಿತು. ಚಿಕ್ಕಂದಿನಿಂದಲೂ ಮಿನಿ ಒಲಿಂಪಿಕ್ಸ್ ನಲ್ಲಿ ಪದಕ ಗಳಿಸುವ ಆಸೆ ಹೊಂದಿದ್ದೆ. ಆದ್ರೆ, ಕೊನೆಯಲ್ಲಿ ನಿರಾಸೆ ಅನುಭವಿಸಿದ್ದು, ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಪದಕ ಗಳಿಸುವ ಹಂಬಲ ಹೊಂದಿರೋದಾಗಿ ಸಜನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...