alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಲ್ಫ್ ಆಡಿ ರಿಲ್ಯಾಕ್ಸ್ ಆದ ‘ಕ್ಯಾಪ್ಟನ್ ಕೂಲ್’

ms-dhoni-golfಟೀಮ್ ಇಂಡಿಯಾ, ಭಾನುವಾರದಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ವಿಶ್ವ ಕಪ್ ಟಿ20 ಪಂದ್ಯವನ್ನು ಆಡಲಿದೆ. ಇದಕ್ಕಾಗಿ ಈಗಾಗಲೇ ಆಟಗಾರರು ಮೊಹಾಲಿಗೆ ಆಗಮಿಸಿದ್ದು, ಈ ಮಧ್ಯೆ ಬಿಡುವು ಮಾಡಿಕೊಂಡ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಗಾಲ್ಫ್ ಆಡಿದ್ದಾರೆ.

ಚಂಡೀಗಡ ಗಾಲ್ಫ್ ಕ್ಲಬ್ ಗೆ ಸಹ ಆಟಗಾರ ರೋಹಿತ್ ಶರ್ಮಾ ಹಾಗೂ ಟೀಮ್ ಇಂಡಿಯಾ ಮ್ಯಾನೇಜರ್ ರವಿಶಾಸ್ತ್ರಿ ಜೊತೆ ತೆರಳಿದ್ದ ಧೋನಿ, ಸ್ವಲ್ಪ ಕಾಲ ಗಾಲ್ಫ್ ಆಟವಾಡಿದ್ದಾರೆ. ಭಾನುವಾರದ ಮ್ಯಾಚ್ ಭಾರತಕ್ಕೆ ಬಹು ಮುಖ್ಯವಾಗಿದ್ದು, ಇಂದು ತಂಡದ ಆಟಗಾರರು ಮೂರು ಗಂಟೆಗಳ ಕಾಲ ಪ್ರಾಕ್ಟೀಸ್ ಮಾಡಲಿದ್ದಾರೆ.

ಈ ಮಧ್ಯೆ ಜಲಂಧರ್ ಮೂಲದ ಆಟಗಾರ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್ ಜೀವನದ 18 ವಸಂತಗಳನ್ನು ಪೂರೈಸಿದ್ದು, ಕ್ಯಾಪ್ಟನ್ ಧೋನಿಯಾದಿಯಾಗಿ ಸಹ ಆಟಗಾರರು ಅವರನ್ನು ಅಭಿನಂದಿಸಿದ್ದಾರೆ. ಬಾಂಗ್ಲಾದೇಶದ ವಿರುದ್ದದ ರೋಚಕ ಪಂದ್ಯದಲ್ಲಿ 1 ರನ್ ಗಳ ರೋಚಕ ಜಯ ಗಳಿಸಿರುವ ಭಾರತ ತಂಡ, ನಾಳಿನ ಪಂದ್ಯವನ್ನೂ ಜಯಿಸುವ ವಿಶ್ವಾಸ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...