alex Certify
ಕನ್ನಡ ದುನಿಯಾ       Mobile App
       

Kannada Duniya

3 ನೇ ಮದುವೆಯಾದ ಮಾಜಿ ಕ್ರಿಕೆಟಿಗನ ಅಸಲಿಯತ್ತು ಬಿಚ್ಚಿಟ್ಟ ಮಾಜಿ ಪತ್ನಿ

ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ರ ಮೂರನೇ ಮದುವೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮದುವೆಯೊಂದಿಗೆ ಪಾಕ್ ಪ್ರಧಾನಿಯಾಗಬೇಕು ಅನ್ನೋ ಇಮ್ರಾನ್ ಖಾನ್ ಕನಸಿಗೆ ಬೆಂಕಿ ಬಿದ್ದಂತಾಗಿದೆ ಅಂತಾ ಮಾಜಿ ಪತ್ನಿ ರೇಹಮ್ ಖಾನ್ ಟೀಕಿಸಿದ್ದಾಳೆ.

65 ವರ್ಷದ ಇಮ್ರಾನ್ ಖಾನ್ ತಮ್ಮ ಆಧ್ಯಾತ್ಮಿಕ ಸಲಹೆಗಾರ್ತಿ, 5 ಮಕ್ಕಳ ತಾಯಿ ಬುಶ್ರಾ ಮನೇಕಾಳನ್ನು ಮದುವೆಯಾಗಿದ್ದರು. ಇಮ್ರಾನ್ ಖಾನ್ ರ ಮದುವೆಯ ಫೋಟೋದಲ್ಲಿ ಬುಶ್ರಾಳ ಮುಖವನ್ನು ಕೂಡ ತೋರಿಸಿರಲಿಲ್ಲ. ಪೂರ್ತಿಯಾಗಿ ಆಕೆ ಶಾಲು ಹೊದ್ದು ಕುಳಿತಿದ್ದಳು.

ಇದನ್ನು ಕೂಡ ರೇಹಮ್ ಖಾನ್ ಖಂಡಿಸಿದ್ದಾಳೆ. ಪಾಕಿಸ್ತಾನ ಚುನಾವಣೆಗೆ 4 ತಿಂಗಳುಗಳ ಮೊದಲೇ ಈ ಮದುವೆ ಮೂಲ ಇಮ್ರಾನ್ ಖಾನ್ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ ಎಂದಿದ್ದಾಳೆ. ತಮ್ಮ ಹೊಸ ಪತ್ನಿಯ ಅನುಮತಿಯಿಲ್ಲದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಅಂತಾ ಇಮ್ರಾನ್ ಖಾನ್ ಹೇಳಿದ್ದಾರೆ.

ಅವರ ರಾಜಕೀಯ ಬದುಕು ಅಂತ್ಯವಾಗ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ ಅಂತಾ ಮಾಜಿ ಪತ್ನಿ ಕಿಡಿಕಾರಿದ್ದಾಳೆ. ತನ್ನನ್ನು ಮದುವೆಯಾದಾಗಿನಿಂದ್ಲೂ ಇಮ್ರಾನ್, ಬುರ್ಶಾ ಜೊತೆಗೆ ಸಂಬಂಧ ಹೊಂದಿದ್ದರು ಅಂತಾ ಆರೋಪಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...