alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪೊಪ್ಪಿಕೊಂಡ ರೊನಾಲ್ಡೊಗೆ 150 ಕೋಟಿ ರೂ. ದಂಡ

ತೆರಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪೋರ್ಚುಗಲ್ ನ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ.

ರೊನಾಲ್ಡೊ, ಆರೋಪವನ್ನು ಒಪ್ಪಿಕೊಂಡಿರುವ ಕಾರಣ, ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 150 ಕೋಟಿ ರೂಪಾಯಿ ದಂಡ ವಿಧಿಸಲಾಗುತ್ತಿದ್ದು, ಆದರೆ ಸ್ಪೇನ್ ಕಾನೂನಿನ ಪ್ರಕಾರ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಶಿಕ್ಷೆಗೆ ಗುರಿಯಾದರೆ ಈ ಅವಧಿಯನ್ನು ಜೈಲಿನಲ್ಲಿ ಕಳೆಯುವ ಅವಶ್ಯಕತೆ ಇಲ್ಲದ ಕಾರಣ ಕಾರಾಗೃಹ ವಾಸ ಭೀತಿಯಿಂದ ಪಾರಾಗಿದ್ದಾರೆ.

ರೊನಾಲ್ಡೊ ಮತ್ತು ಅವರ ತಂದೆ ತೆರಿಗೆ ವಂಚಿಸಿದ್ದಾರೆಂದು ಅಧಿಕಾರಿಗಳು ಅವರುಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ತಮ್ಮಗಳ ಮೇಲಿನ ಆರೋಪವನ್ನು ನಿರಾಕರಿಸುತ್ತ ಬಂದಿದ್ದ ರೊನಾಲ್ಡೊ, ಈಗ ಅದನ್ನು ಒಪ್ಪಿಕೊಂಡು 150 ಕೋಟಿ ರೂ. ದಂಡವನ್ನು ಪಾವತಿಸಲು ಸಮ್ಮತಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...