alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಚಾಲೆಂಜರ್ಸ್ ಗೆ ಮತ್ತೆ ಮುಖಭಂಗ

mi-rcb-mui

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಮುಖಭಂಗ ಅನುಭವಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆ ಹಾಕಿತು.

ಮನ್ ದೀಪ್ ಸಿಂಗ್ 17, ವಿರಾಟ್ ಕೊಹ್ಲಿ 20, ಎ.ಬಿ. ಡಿ’ವಿಲಿಯರ್ಸ್ 43, ಪವನ್ ನೇಗಿ 35 ರನ್ ಗಳಿಸಿದ್ದಾರೆ. ಮುಂಬೈ ಪರ ಮಿಚೆಲ್ 3, ಕೃಣಾಲ್ ಪಾಂಡ್ಯ 2, ಕರಣ್ ಶರ್ಮ ಹಾಗೂ ಜಸ್ ಪ್ರೀತ್ ಬೂಮ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.

163 ರನ್ ಗೆಲುವಿನ ಗುರಿ ಪಡೆದ ಮುಂಬೈ ಇಂಡಿಯನ್ಸ್ ಇನ್ನೂ 2 ಎಸೆತ ಬಾಕಿ ಉಳಿದಿರುವಾಗಲೇ 5 ವಿಕೆಟ್ ಅಂತರದಿಂದ ಜಯ ಗಳಿಸಿದೆ.

ಜೋಸ್ ಬಟ್ಲರ್ 33, ಕೀರಾನ್ ಪೋಲಾರ್ಡ್ 17, ರೋಹಿತ್ ಶರ್ಮ 56, ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿದ್ದಾರೆ. ಆರ್.ಸಿ.ಬಿ. ಪರ ಪವನ್ ನೇಗಿ 2 ವಿಕೆಟ್ ಪಡೆದಿದ್ದಾರೆ.

ನೀರಸ ಪ್ರದರ್ಶನ ನೀಡುವ ಮೂಲಕ ಈಗಾಗಲೇ ಪ್ಲೇ ಆಫ್ ಅವಕಾಶವನ್ನು ಕಳೆದುಕೊಂಡಿರುವ ಆರ್.ಸಿ.ಬಿ. ಮತ್ತೆ ಮುಖಭಂಗ ಅನುಭವಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...