alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ವಿಚಾರದಲ್ಲಿ ಕೊಹ್ಲಿ ಹಿಂದಿಕ್ಕಿದ ಆಟಗಾರ

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಟೀಂ ಇಂಡಿಯಾದಲ್ಲಿ ಕೊಹ್ಲಿ ಅತ್ಯಂತ ಫಿಟ್ ಆಟಗಾರ. ಫಿಟ್ನೆಸನ್ನು ಕೊಹ್ಲಿ ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆಂದು ಅನೇಕ ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೇ ಅಲ್ಲ, ಬೇರೆ ಆಟಗಾರರಿಗೆ ಫಿಟ್ ಆಗಿರಲು ಕೊಹ್ಲಿ ಪ್ರೇರಣೆ ಮಾಡ್ತಾರೆ. ಈಗ ಕೊಹ್ಲಿ ಫಿಟ್ನೆಸ್ ಗೆ ಆಟಗಾರನೊಬ್ಬ ಸವಾಲಾಗಿದ್ದಾನೆ.

ಯಸ್, ಐಪಿಎಲ್ ಮೂಲಕ ಪರಿಚಿತರಾದ ಅರುಣ್ ಕಾರ್ತಿಕ್, ಫಿಟ್ನೆಸ್ ವಿಚಾರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ತಮಿಳುನಾಡಿನ ಈ ಆಟಗಾರ ಅಸ್ಸಾಂಗಾಗಿ ಆಟವಾಡ್ತಿದ್ದಾರೆ. ತಮಿಳುನಾಡು ಪ್ರೀಮಿಯರ್ ಟಿ-20 ಪಂದ್ಯಾವಳಿಯಲ್ಲಿ ಅರುಣ್ ಮಧುರೈ ಪ್ಯಾಂಥರ್ಸ್ ಪರ ಆಟವಾಡಿದ್ದಾರೆ. ಪಂದ್ಯಾವಳಿ ಕೊನೆ ಹಂತದಲ್ಲಿ ಮತ್ತೆ ಅಬ್ಬರಿಸಿ 75 ರನ್ ಗಳಿಸಿದ ಅರುಣ್, ತಂಡದ ಗೆಲುವಿಗೆ ಕಾರಣವಾಗಿದ್ದರು.

ಈ ಪಂದ್ಯಾವಳಿ ನಂತ್ರ ಅರುಣ್ ಯೋ ಯೋ ಪರೀಕ್ಷೆಯಲ್ಲಿ ಗಳಿಸಿದ ಸ್ಕೋರ್ ವಿವರ ನೀಡಿದ್ದಾರೆ. ಇದನ್ನು ಕೇಳಿ ಕೊಹ್ಲಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕಾರ್ತಿಕ್ 19.2 ಸ್ಕೂರ್ ಗಳಿಸಿ ಯೋ ಯೋ ಪರೀಕ್ಷೆ ಪಾಸ್ ಆಗಿದ್ದಾರಂತೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಯೋ ಯೋ ಪರೀಕ್ಷೆಯಲ್ಲಿ 19 ಸ್ಕೋರ್ ಗಳಿಸಿದ್ದರು. ಆದ್ರೆ ಕಾರ್ತಿಕ್ 19.2 ಸ್ಕೋರ್ ಗಳಿಸಿ ಕೊಹ್ಲಿ ದಾಖಲೆ ಮುರಿದಿದ್ದಾರೆ. ಕೊಹ್ಲಿಗಿಂತ ಹೆಚ್ಚು ಸ್ಕೋರ್ ಸಾಧ್ಯವಿಲ್ಲ ಎನ್ನುವವರಿಗೆ ಅಂಡರ್ 19 ತಂಡದ ಮಾಜಿ ಆಟಗಾರ ಮಯಾಂಕ್ ಕೂಡ ಶಾಕ್ ನೀಡಿದ್ದರು. ಅವ್ರು 19.3 ಸ್ಕೋರ್ ಗಳಿಸಿ ಯೋ ಯೋ ಟೆಸ್ಟ್ ಪಾಸ್ ಆಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...