alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯಿಂದಲೇ ಬಹಿರಂಗವಾಯ್ತು ಆರ್.ಸಿ.ಬಿ. ಸೋಲಿನ ರಹಸ್ಯ

virat mnkl

ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ ತಂಡ ತೋರಿದ ಅತ್ಯುತ್ತಮ ಪ್ರದರ್ಶನದಿಂದ, ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದರೊಂದಿಗೆ 3 ಸಲ ಫೈನಲ್ ಗೇರಿದರೂ ಪ್ರಶಸ್ತಿ ಗೆಲ್ಲುವ ಆರ್.ಸಿ.ಬಿ. ಕನಸು ಕನಸಾಗಿಯೇ ಉಳಿದಿದೆ.

ಈ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದರೂ, ನಂತರದಲ್ಲಿ ಪುಟಿದೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರಂತರವಾಗಿ ಗೆಲುವು ಸಾಧಿಸುತ್ತ ಮುನ್ನಡೆದು ಫೈನಲ್ ಹಂತಕ್ಕೆ ಬಂದಿತ್ತು. ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೊಹ್ಲಿಯಂತೂ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ. ಇದೇ ವೇಳೆ ಫೈನಲ್ ನಲ್ಲಿ ತಂಡದ ಸೋಲಿಗೆ ಕಾರಣವೇನು ಎಂಬುದನ್ನು ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.

ಟೂರ್ನಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಮಹತ್ವದ ಫೈನಲ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಲಾಗಲಿಲ್ಲ. ಗೆಲುವಿನ ಗುರಿ ತಲುಪಲು ಹೊರಟ ನಮ್ಮ ತಂಡಕ್ಕೆ ಉತ್ತಮ ಆರಂಭವೇ ಸಿಕ್ಕಿತ್ತು. ಆದರೆ, ಎ.ಬಿ. ಡಿವಿಲಿಯರ್ಸ್ ಮತ್ತು ನಾನು ಬೇಗನೇ ಔಟಾಗಿದ್ದು, ಸೋಲಿಗೆ ಪ್ರಮುಖ ಕಾರಣ. ಸನ್ ರೈಸರ್ಸ್ ತಂಡದ ಬೌಲಿಂಗ್ ಕೂಡ ಉತ್ತಮವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...