alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್. ಜಡೇಜ ನಂ. 1 ಆಲ್ ರೌಂಡರ್

r-jadej

ಐ.ಸಿ.ಸಿ. ಟೆಸ್ಟ್ ಕ್ರಿಕೆಟ್ ಆಲ್ ರೌಂಡರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ಭರವಸೆಯ ಆಟಗಾರ ರವೀಂದ್ರ ಜಡೇಜ ನಂಬರ್ 1 ಸ್ಥಾನದಲ್ಲಿದ್ದಾರೆ.

ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಅವರು, ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಹಲ್ ಹಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗಳಿಸಿ, ಅಜೇಯ 70 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ.

438 ಅಂಕಗಳೊಂದಿಗೆ ಜಡೇಜ ಆಲ್ ರೌಂಡರ್ ಗಳ ಪಟ್ಟಿಯಲ್ಲಿ 1 ನೇ ಸ್ಥಾನದಲ್ಲಿದ್ದು, ಶಕೀಬ್ ಹಲ್ ಹಸನ್ 431 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ.

3 ನೇ ಸ್ಥಾನದಲ್ಲಿ ಆರ್. ಅಶ್ವಿನ್(418 ಅಂಕ), 4 ನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಮೊಯಿನ್ ಅಲಿ(409 ಅಂಕ), 5 ನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್(360 ಅಂಕ) ಅವರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...