alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಗ್ಲಾ ಟೆಸ್ಟ್ ನಲ್ಲಿ ಹೊಸ ಇತಿಹಾಸ ಬರೆದ ಅಶ್ವಿನ್

ashwin

ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಪ್ರಮುಖ ಬೌಲರ್.  ಟೆಸ್ಟ್ ಪಂದ್ಯದಲ್ಲಂತೂ ಭಾರತ ತಂಡದ ಆಧಾರ ಸ್ಥಂಬ. ಹಾಗಾಗಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಅಶ್ವಿನ್ ಗೆ ವಿಶ್ರಾಂತಿ ನೀಡಲಾಗಿತ್ತು. ಫುಲ್ ರಿಲ್ಯಾಕ್ಸ್ ಆಗಿ ತಂಡಕ್ಕೆ ವಾಪಸ್ಸಾಗಿರುವ ಅಶ್ವಿನ್ ಮೈದಾನದಲ್ಲಿ ಸ್ಪಿನ್ ಜಾದೂ ಶುರು ಮಾಡಿದ್ದಾರೆ.

ಹೈದ್ರಾಬಾದ್ ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅತ್ಯಂತ ವೇಗವಾಗಿ 250 ವಿಕೆಟ್ ಪಡೆದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬಾಂಗ್ಲಾ ಬ್ಯಾಟ್ಸ್ ಮನ್ ಗಳಾದ ಶಕೀಬ್ ಅಲ್ ಹಸನ್ ಹಾಗೂ ಮುಷ್ಪಿಖರ್ ರೆಹಮಾನ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ದಾಖಲೆ ಮಾಡಿದ್ರು.

ಅಶ್ವಿನ್ 45 ಟೆಸ್ಟ್ ಪಂದ್ಯಗಳಿಂದ 250 ವಿಕೆಟ್ ಸಂಪಾದಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬೌಲರ್ ಡೆನಿಸ್ ಲಿಲ್ಲೀ 48 ಟೆಸ್ಟ್ ಪಂದ್ಯಗಳನ್ನಾಡಿ 250 ವಿಕೆಟ್ ಪಡೆದಿದ್ದರು. ಡೇಲ್ ಸ್ಟೇಯ್ನ್ 49, ಅಲನ್ ಡೊನಾಲ್ಡ್ 50 ಹಾಗೂ ವಕಾರ್ ಯುನಿಸ್ 51 ಟೆಸ್ಟ್ ಪಂದ್ಯಗಳಿಂದ 250 ವಿಕೆಟ್ ಪಡೆದಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...