alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಹೊಸ ವರಸೆ ಶುರು ಮಾಡಿದ ರವಿ ಶಾಸ್ತ್ರಿ

sachin

ತಮ್ಮಿಷ್ಟದಂತೆ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಆಯ್ಕೆ ಮಾಡಿಕೊಂಡಿದ್ದ ತರಬೇತುದಾರ ರವಿ ಶಾಸ್ತ್ರಿ ಈಗ ಹೊಸ ವರಸೆ ಶುರು ಮಾಡಿದ್ದಾರೆ. ಭಾರತ ತಂಡಕ್ಕೆ ಸಲಹೆಗಾರರಾಗಿ ಸಚಿನ್ ತೆಂಡೂಲ್ಕರ್ ಅವರನ್ನು ನೇಮಕ ಮಾಡುವಂತೆ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.

ನಿನ್ನೆ ಬಿಸಿಸಿಐ ವಿಶೇಷ ಸಮಿತಿ ಜೊತೆಗೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಸಭೆಯಲ್ಲಿ ಸಿಕೆ ಖನ್ನಾ, ಸಿಇಓ ರಾಹುಲ್ ಜೊಹ್ರಿ, ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಡಯಾನಾ ಎಡುಲ್ಜಿ ಕೂಡ ಭಾಗವಹಿಸಿದ್ದರು. ಸದ್ಯ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

ಅದೇ ಸಮಿತಿ ರವಿಶಾಸ್ತ್ರಿಯನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಆಯ್ಕೆ ಮಾಡಿತ್ತು. ತೆಂಡೂಲ್ಕರ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡುವಂತೆ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ. ಆದ್ರೆ ಎಲ್ಲರ ಸಮ್ಮತಿ ಪಡೆದೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಅಂತಾ ಬಿಸಿಸಿಐ ಹೇಳಿದೆ.

ಟೀಂ ಇಂಡಿಯಾ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಸಚಿನ್ ತೆಂಡೂಲ್ಕರ್ ಒಪ್ತಾರಾ ಅನ್ನೋ ಪ್ರಶ್ನೆ ಕೂಡ ಬಿಸಿಸಿಐಯನ್ನು ಕಾಡ್ತಾ ಇದೆ. ಐಪಿಎಲ್ ಸೇರಿದಂತೆ ಸಚಿನ್ ಗೆ ಇತರ ಜವಾಬ್ಧಾರಿಗಳಿರೋದ್ರಿಂದ ರವಿ ಶಾಸ್ತ್ರಿ ಬೇಡಿಕೆಗೆ ಯಾವ ರೀತಿ ರೆಸ್ಪಾನ್ಸ್ ಕೊಡ್ತಾರೆ ಅನ್ನೋದನ್ನು ಕಾದು ನೋಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...