alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ವೇಳೆ ಡ್ರೆಸ್ಸಿಂಗ್ ರೂಮಿನಲ್ಲಿ ತೂಕಡಿಸಿದ ರವಿ ಶಾಸ್ತ್ರಿ

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನಾಡ್ತಿದೆ. ಬುಧವಾರ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರಂಭದಲ್ಲಿ ಇಂಗ್ಲೆಂಡ್ ಆಟಗಾರರು ಅಬ್ಬರಿಸಿದ್ರು. ಈ ಮಧ್ಯೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಊಟದ ವಿರಾಮದ ನಂತ್ರ ವೇಗಿ ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸಿ ಭಾರತ ಉಸಿರಾಡುವಂತೆ ಮಾಡಿದ್ರು. ಊಟ ಮುಗಿಸಿ ಪಂದ್ಯ ವೀಕ್ಷಣೆಗೆ ಕುಳಿತಿದ್ದ ರವಿ ಶಾಸ್ತ್ರಿ ವಿಕೆಟ್ ಬೀಳುವ ಮೊದಲು ಬೋರ್ ಆಗಿದ್ದಂತೆ ಕಾಣ್ತಿತ್ತು. ಕುಳಿತಲ್ಲಿಯೇ ಶಾಸ್ತ್ರಿ ನಿದ್ರೆಗೆ ಜಾರಿದ್ದರು. ತೂಕಡಿಸುತ್ತಿದ್ದ ರವಿ ವಿಡಿಯೋ ವೈರಲ್ ಆಗಿದೆ.

ಕಾಮೆಂಟ್ರಿ ನೀಡ್ತಿದ್ದ ಹರ್ಭಜನ್ ಸಿಂಗ್ ಕೂಡ ರವಿ ಎಬ್ಬಿಸುವ ಕೆಲಸ ಮಾಡಿದ್ದಾರೆ. ಶಾಸ್ತ್ರಿ ಚಿಕ್ಕದಾಗಿ ನಿದ್ರೆ ಮಾಡ್ತಿದ್ದಾರೆ. ರವಿ ಏಳಿ ಎಂದು ಹರ್ಭಜನ್ ಹೇಳಿದ್ದಾರೆ. ರವಿ ಶಾಸ್ತ್ರಿ ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರೊಲರ್ಸ್ ಕಮೆಂಟ್ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...