alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವೇತನ ಕೇಳಿದ್ರೆ…..

xravi-shastri-01-1467360468-jpg-pagespeed-ic-50jnqgsmqk

ಟೀಂ ಇಂಡಿಯಾಕ್ಕೆ ಬಿಸಿಸಿಐ ಕೊನೆಗೂ ಅಧಿಕೃತ ತರಬೇತಿ ಸಿಬ್ಬಂದಿಯನ್ನು ನೇಮಕ ಮಾಡಿದೆ. ರವಿ ಶಾಸ್ತ್ರಿ ಹೆಡ್ ಕೋಚ್ ಆದ್ರೆ, ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಈ ಹಿಂದೆ ಟೀಮ್ ಡೈರೆಕ್ಟರ್ ಆಗಿದ್ದ ರವಿಶಾಸ್ತ್ರಿ ಈಗ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.

ಕೇವಲ ಹುದ್ದೆಯಲ್ಲಿ ಮಾತ್ರವಲ್ಲ ಅವರ ವೇತನದಲ್ಲೂ ಭಾರೀ ಹೆಚ್ಚಳವಾಗಿದೆ. ರವಿ ಶಾಸ್ತ್ರಿ ವಾರ್ಷಿಕ 8 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಅಂತಾ ಬಿಸಿಸಿಐ ತಿಳಿಸಿದೆ. ಈ ಹಿಂದೆ ತರಬೇತುದಾರರಾಗಿದ್ದ ಅನಿಲ್ ಕುಂಬ್ಳೆ ಅವರಿಗೆ 6.5 ಕೋಟಿ ರೂಪಾಯಿ ನೀಡಲಾಗಿತ್ತು. ರವಿ ಶಾಸ್ತ್ರಿಗೆ ಅದಕ್ಕಿಂತ್ಲೂ 1.5 ಕೋಟಿ ರೂಪಾಯಿ ಅಧಿಕ ವೇತನ ನೀಡಲಾಗ್ತಿದೆ.

ಉಳಿದ ಮೂವರು ತರಬೇತುದಾರರಾದ ಭರತ್ ಅರುಣ್, ಆರ್.ಶ್ರೀಧರ್ ಹಾಗೂ ಸಂಜಯ್ ಬಂಗಾರ್ ಗೆ 2-3 ಕೋಟಿ ರೂಪಾಯಿ ವೇತನ ನೀಡುವ ಸಾಧ್ಯತೆ ಇದೆ. ಸಂಜಯ್ ಬಂಗಾರ್ ಸಹಾಯಕ ತರಬೇತುದಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...