alex Certify
ಕನ್ನಡ ದುನಿಯಾ       Mobile App
       

Kannada Duniya

‘ಫಿಟ್ನೆಸ್ ಇದ್ದವರಿಗೆ ಮಾತ್ರ ಟೀಂನಲ್ಲಿ ಅವಕಾಶ’

ravi-coch

ಮುಂಬೈ: ಅನಿಲ್ ಕುಂಬ್ಳೆಯಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ನೇಮಕವಾಗಿದ್ದಾರೆ.

ಅವರು ಕೋಚ್ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ರವಿಶಾಸ್ತ್ರಿ, ಕ್ರೀಡೆಯಲ್ಲಿ ಸೋಲು ಗೆಲುವು, ಸಹಜ. ಕೆಲವೊಮ್ಮೆ ತಂಡ ಉತ್ತಮ ಪ್ರದರ್ಶನ ನೀಡಿದಾಗಲೂ ಸೋಲುಂಟಾಗುತ್ತದೆ. ಪ್ರಸ್ತುತ ಭಾರತ ತಂಡ ಶ್ರೇಷ್ಠವಾದ ಪ್ರದರ್ಶನವನ್ನು ನೀಡುತ್ತಿದೆ. ಒಂದು ಪಂದ್ಯದಲ್ಲಿ ಸೋತಿದ್ದರೂ, ಏನಾಗುತ್ತಿರಲಿಲ್ಲ. ತಂಡದ ಬೌಲಿಂಗ್, ಫೀಲ್ಡಿಂಗ್, ಬ್ಯಾಟಿಂಗ್ ಉತ್ತಮ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.

2019 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡದ ಆಟಗಾರರ ಫಿಟ್ ನೆಸ್ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಫಿಟ್ನೆಸ್ ಇದ್ದವರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಫಿಟ್ನೆಸ್ ಹೊಂದಿದ ತಂಡದಿಂದ ಮಾತ್ರ ಉತ್ತಮವಾದ ಪ್ರದರ್ಶನವನ್ನು ನಿರೀಕ್ಷಿಸಲು ಸಾಧ್ಯವಿದೆ. ಹಾಗಾಗಿ ನಾವು ಫಿಟ್ ನೆಸ್ ಗೆ ಒತ್ತು ನೀಡಿದ್ದೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...