alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾದ ಮನಮೋಹನ್ ಸಿಂಗ್ ಯಾರು?

india-director-of-cricket-ravi-shastri-during-a-nets-session3-600x339

ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ರೆಡಿ ಆಗಿದ್ದಾರೆ. ಕುಂಬ್ಳೆ ರಾಜೀನಾಮೆ ಬಳಿಕ ರವಿಶಾಸ್ತ್ರಿ ಹಾದಿಯನ್ನು ಸುಗಮ ಮಾಡಲೆಂದೇ ಬಿಸಿಸಿಐ ಕೂಡ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ.

ಕೋಚ್ ಹುದ್ದೆಗಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಅಂತಾ ರವಿ ಶಾಸ್ತ್ರಿ ಕೂಡ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಜೋಕ್ ಗಳ ಸುರಿಮಳೆಯಾಗಿದೆ. ಟೀಂ ಇಂಡಿಯಾಕ್ಕೆ ಒಬ್ರು ಮನಮೋಹನ್ ಸಿಂಗ್ ಸಿಕ್ತಿದ್ದಾರೆ ಅಂತಾ ಕೆಲವರು ಟ್ವೀಟ್ ಮಾಡಿದ್ದಾರೆ.

ರವಿಶಾಸ್ತ್ರಿ ಟೀಂ ಇಂಡಿಯಾಕ್ಕೆ ಕೋಚ್ ಆಗ್ತಿಲ್ಲ. ಕೊಹ್ಲಿಯ ಸೇವಕ, ರಕ್ಷಕ ಹಾಗೂ ಮುಖವಾಣಿಯಾಗ್ತಿದ್ದಾರೆ ಅಂತಾ ಇನ್ನು ಕೆಲವರು ಟೀಕಿಸಿದ್ದಾರೆ. ಕುಂಬ್ಳೆ ಕೋಚ್ ಹುದ್ದೆ ತೊರೆದ ಬಳಿಕ ಆ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಹಾಗೂ ಟಾಮ್ ಮೂಡಿ ಹೆಸರು ಕೇಳಿಬಂದಿತ್ತು.

ಆದ್ರೆ ರವಿ ಶಾಸ್ತ್ರಿ, ಕೊಹ್ಲಿ ಫೇವರಿಟ್ ಆಗಿದ್ರಿಂದ ಅವರೇ ಆಯ್ಕೆಯಾಗ್ತಾರೆ ಎನ್ನಲಾಗ್ತಿದೆ. ಕಳೆದ ಬಾರಿ ಕೂಡ ರವಿ ಶಾಸ್ತ್ರಿ ಕೋಚ್ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದ್ರೆ ಗಂಗೂಲಿ, ಸಚಿನ್ ಮತ್ತು ಲಕ್ಷ್ಮಣ್ ಅವರಿದ್ದ ಸಮಿತಿ ಕುಂಬ್ಳೆಯನ್ನು ಆಯ್ಕೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...