alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆ ಸ್ಥಾನಕ್ಕೆ ರವಿಶಾಸ್ತ್ರಿ ಆಯ್ಕೆ..?

rac-cr

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಮನಸ್ತಾಪದಿಂದ ಮುಖ್ಯ ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ.

ಇದಾದ ಬಳಿಕ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಏನೆಲ್ಲಾ ಬೆಳವಣಿಗೆಗಳಾಗಿವೆ ಎಂಬುದು ಬಹಿರಂಗವಾಗಿತ್ತು. ವೆಸ್ಟ್ ಇಂಡೀಸ್ ಸರಣಿವರೆಗೂ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಲಾಗಿದ್ದರೂ, ಕುಂಬ್ಳೆ ರಾಜೀನಾಮೆ ನೀಡಿದ್ದರು.

ಕೋಚ್ ಇಲ್ಲದೆಯೇ ವಿಂಡೀಸ್ ಸರಣಿಯಲ್ಲಿ ಟೀಂ ಇಂಡಿಯಾ ಪಾಲ್ಗೊಂಡಿದೆ. ಕೊಹ್ಲಿ ಅವರ ಕಾರಣದಿಂದಲೇ ಕುಂಬ್ಳೆ ಕೋಚ್ ಹುದ್ದೆಯನ್ನು ತೊರೆಯಬೇಕಾಯಿತು ಎಂಬುದು ಹಳೆ ವಿಚಾರ.

ಈಗ ಕೊಹ್ಲಿ ಸಲಹೆಯಂತೆಯೇ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ ಅವರನ್ನು ನೇಮಕ ಮಾಡಲಾಗುವುದು. ಸಲಹಾ ಸಮಿತಿಯ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಅವರ ಅಭಿಪ್ರಾಯ ಪಡೆದು, ರವಿಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡುವ ನಿಟ್ಟಿನಲ್ಲಿ ಪ್ರಕ್ತಿಯೆ ನಡೆದಿವೆ.

ಕೋಚ್ ಹುದ್ದೆಗೆ ತಾವು ಅರ್ಜಿ ಸಲ್ಲಿಸುವುದಾಗಿ ರವಿಶಾಸ್ತ್ರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...