alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಾಗ್ತಾರೆ ಟೀಂ ಇಂಡಿಯಾ ಕೋಚ್..?

download-2

ಟೀ ಇಂಡಿಯಾದ ಮುಖ್ಯ ಕೋಚ್ ಆಯ್ಕೆ ದಿನಾಂಕ ಹತ್ತಿರ ಬಂದಿದೆ. ಸೋಮವಾರ ಮುಂಬೈನಲ್ಲಿ ನಡೆಯುವ ಕ್ರಿಕೆಟ್ ಸಲಹಾ ಮಂಡಳಿ ಸಭೆಯಲ್ಲಿ ಕೋಚ್ ಆಯ್ಕೆ ನಡೆಯಲಿದೆ. ಸದಸ್ಯರ ಬಳಿ 10 ಅರ್ಜಿಗಳು ಬಂದಿದ್ದು, ಅರ್ಜಿದಾರರ ಜೊತೆ ಸಂದರ್ಶನ ನಡೆಸಿ ನಂತ್ರ ಕೋಚ್ ಹೆಸರನ್ನು ಅಂತಿಮಗೊಳಿಸಲಾಗುವುದು.

ರವಿ ಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಫಿಬೋಸ್, ದೊಡ್ಡ ಗಣೇಶ್, ಲ್ಯಾನ್ಸ್ ಕ್ಲೂಸ್ನರ್, ಲಾಲ್ ಚಂದ್ ರಜಪೂತ್, ಫಿಲ್ ಸಿಮೂನ್ಸ್, ರಾಕೇಶ್ ಶರ್ಮಾ, ಉಪೇಂದ್ರ ನಾಥ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ ಪಟ್ಟಿಯಲ್ಲಿ ರವಿಶಾಸ್ತ್ರಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ ಹೆಸರಿದೆ. ಆಯ್ಕೆ ಸಮಿತಿಗೆ ಬಂದ 10 ಅರ್ಜಿಗಳಲ್ಲಿ 6 ಅರ್ಜಿದಾರರನ್ನು ಸಂದರ್ಶನಕ್ಕೆ ಕರೆಯಲಿದೆ ಎಂದು ಮೂಲಗಳು ಹೇಳಿವೆ. ಅಂತಿಮಗೊಂಡ ಪಟ್ಟಿಯಲ್ಲಿ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಸಿಮೂನ್ಸ್ ಹಾಗೂ ರಿಚರ್ಡ್ ಮತ್ತು ರಜಪೂತ್ ಹೆಸರು ಕೇಳಿ ಬಂದಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ವಿವಾದ ಹುಟ್ಟಿಕೊಂಡ ನಂತ್ರ ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...