alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪ್ರಕಾರ ವಿಶ್ವದ ಬೆಸ್ಟ್ ಸ್ಪಿನ್ನರ್ ಯಾರು ಗೊತ್ತಾ?

ಕ್ರಿಕೆಟ್ ಜಗತ್ತಿನ ದಂತಕತೆ ಸಚಿನ್ ತೆಂಡೂಲ್ಕರ್, ಟಿ 20 ಆವೃತ್ತಿಯ ಬೆಸ್ಟ್ ಸ್ಪಿನ್ನರ್ ಯಾರೆಂಬುದನ್ನು ಹೇಳಿದ್ದಾರೆ. ಸಚಿನ್ ಪ್ರಕಾರ ಅಫ್ಘಾನಿಸ್ತಾನದ ಯುವ ಬೌಲರ್ 19 ವರ್ಷದ ರಶೀದ್ ಖಾನ್ ಈ ಸ್ಥಾನಕ್ಕೆ ಅರ್ಹರಂತೆ.

ಕಳೆದ ರಾತ್ರಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ನಿಸ್ಸಂದೇಹವಾಗಿಯೂ ರಶೀದ್ ಖಾನ್, ಟಿ 20 ಆವೃತ್ತಿಯಲ್ಲಿ ವಿಶ್ವದ ಬೆಸ್ಟ್ ಸ್ಪಿನ್ನರ್ ಎಂದಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ರಶೀದ್ ಖಾನ್ ಕೇವಲ 19 ರನ್ ನೀಡಿ 3 ವಿಕೆಟ್ ಗಳಿಸಿದ್ದರಲ್ಲದೆ 10 ಬಾಲ್ ಗಳಲ್ಲಿ 34 ರನ್ ಬಾರಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಶೀದ್ ಖಾನ್ ರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಮುಕ್ತ ಕಂಠದಿಂದ ಪ್ರಶಂಸಿಸಿರುವ ಸಚಿನ್ ತೆಂಡೂಲ್ಕರ್, ಸದ್ಯಕ್ಕೆ ಟಿ20 ಆವೃತ್ತಿಯಲ್ಲಿ ರಶೀದ್ ಖಾನ್ ಬೆಸ್ಟ್ ಸ್ಪಿನ್ನರ್ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...