alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ವೇಗದ ಬೌಲರ್ ಗಳು ಯಾರ್ಯಾರು ಗೊತ್ತಾ…?

ಇಂದು ಕ್ರಿಕೆಟ್ ಅಂದ್ರೆ ಕೇವಲ ಬ್ಯಾಟ್ಸ್ ಮನ್ ಗಳ ಆಟ ಅನ್ನೋ ಹಾಗಾಗಿಬಿಟ್ಟಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಸ್ಫೋಟಕ ಬ್ಯಾಟ್ಸ್ ಮನ್ ಗಳಿಂದಾಗಿ ಜಂಟಲ್ ಮನ್ ಗೇಮ್ ಕೇವಲ ಒನ್ ಸೈಡ್ ಮ್ಯಾಚ್ ಮಾತ್ರಾನಾ ಅನ್ನೋ ಹಾಗಾಗಿಬಿಟ್ಟಿದೆ. ಆದ್ರೆ ಇದೆಲ್ಲವನ್ನು ಮೀರಿ ಕ್ರಿಕೆಟ್ ಲೋಕದ ಕೆಲವು ಬೌಲರ್ ಗಳು ಶ್ರೇಷ್ಠ ಬ್ಯಾಟ್ಸ್ ಮನ್ ಗಳಿಗೆ ಸವಾಲು ಹಾಕುವಂತೆ ಬೌಲಿಂಗ್ ಮಾಡ್ತಾರೆ. ಅಂತ ವಿಶ್ವದ ಟಾಪ್ 10 ವೇಗದ ಬೌಲರ್ ಗಳು ಯಾರು ಅನ್ನೋದನ್ನ ನಾವು ನಿಮಗೆ ಹೇಳ್ತೀವಿ.

ವಿಶ್ವದ ಅತಿ ವೇಗದ ಬೌಲರ್ಗಳ ಪೈಕಿ ಮೊದಲ ಸ್ಥಾನದಲ್ಲಿರೋದು ಭಾರತದ ವೇಗಿ ಉಮೇಶ್ ಯಾದವ್. ಸಾಕಷ್ಟು ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಕಾಡಿರುವ ಉಮೇಶ್ ಯಾದವ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಏಕದಿನ, ಟಿ20, ಟೆಸ್ಟ್ ಮೂರು ಬಗೆಯ ಫಾರ್ಮೆಟ್ ಗಳಲ್ಲಿ ಅವರು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ವಿಶ್ವದ ಎರಡನೆಯ ವೇಗಿ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡಾ. 22 ವರ್ಷದ ರಬಾಡ ಎಸೆತಗಳು ಬಿರುಗಾಳಿಯ ಹಾಗಿರುತ್ತೆ. ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರಿಗೆ ರಬಾಡ ರಿಪ್ಲೇಸ್ಮೆಂಟ್ ಅಂದ್ರು ತಪ್ಪಾಗೋದಿಲ್ಲ. ಇನ್ನು ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡದ ಲೇಯಮ್ ಪ್ಲುಂಕೆಟ್ ಕೂಡ ಜಿಮ್ಮಿ ಅಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರ ಹಾಗೆ ವೇಗಕ್ಕೆ ಹೆಸರುವಾಸಿ.

ನ್ಯೂಜಿಲೆಂಡ್ ನ ವೇಗಿ ಅಡಮ್ ಮಿಲ್ನೆ ವಿಶ್ವದ ವೇಗಿಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೆ ಸ್ಥಾನದಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಇದ್ದಾರೆ. ವೇಗದ ಜೊತೆಗೆ ವಿಭಿನ್ನ ಬೌಲಿಂಗ್ ಶೈಲಿಯ ಮೂಲಕ ಬುಮ್ರಾ ಎದುರಾಳಿಗಳನ್ನ ತಬ್ಬಿಬ್ಬು ಮಾಡ್ತಾರೆ. ಇನ್ನು ಆರನೇ ಸ್ಥಾನದಲ್ಲಿರೋದು ವೇಗಿಗಳ ತವರು ಅಂತಾನೆ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ. ಶಾನನ್ ಗೇಬ್ರಿಯನ್ ವಿಶ್ವದ 6ನೇ ಅತಿ ವೇಗದ ಬೌಲರ್ ಆಗಿದ್ದಾರೆ.

ಏಳನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಶೆಲ್ ಸ್ಟಾರ್ಕ್ ಇದ್ದಾರೆ. ಎಂಟನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಟೈಮಲ್ ಮಿಲ್ಸ್ ಇದ್ದರೆ, 9ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪಾಟ್ ಕುಮ್ಮಿನ್ಸ್ ಇದ್ದಾರೆ. 10ನೇ ಸ್ಥಾನದಲ್ಲಿ ಪಾಕಿಸ್ತಾನದ ವಹಾಬ್ ರಿಯಾಸ್ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...