alex Certify
ಕನ್ನಡ ದುನಿಯಾ       Mobile App
       

Kannada Duniya

ಅಸ್ಸಾಂ ವಿರುದ್ಧ ಭರ್ಜರಿ ಗೆಲುವು ಕಂಡ ಕರ್ನಾಟಕ

ranji

ಮುಂಬೈ: ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕ ತಂಡ 2 ನೇ ಗೆಲುವನ್ನು ದಾಖಲಿಸಿದೆ. ಅಸ್ಸಾ ವಿರುದ್ಧ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದ ಗೆಲುವು ಕಂಡಿದೆ.

ಅಸ್ಸಾಂ ಮೊದಲ ಇನ್ನಿಂಗ್ಸ್ ನಲ್ಲಿ 325 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಅಮಿತ್ ವರ್ಮ ಅಜೇಯ 166, ಸ್ವರೂಪಮ್ 59, ಅರುಣ್ 35 ರನ್ ಗಳಿಸಿದ್ದರು. ಕರ್ನಾಟಕದ ಪರವಾಗಿ ಎಸ್.ಅರವಿಂದ್ 5, ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರು.

ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 570 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಸ್ಟುವರ್ಟ್ ಬಿನ್ನಿ 156, ರಾಬಿನ್ ಉತ್ತಪ್ಪ 128, ಕರುಣ್ ನಾಯರ್ 145, ಸಿ.ಎಂ. ಗೌತಮ್ 73 ರನ್ ಗಳಿಸಿದ್ದರು. ಅಸ್ಸಾಂ ಪರವಾಗಿ ಅರೂಪ್ ದಾಸ್ 4, ಕೃಷ್ಣ ದಾಸ್ 2 ವಿಕೆಟ್ ಪಡೆದರು.

2 ನೇ ಇನ್ನಿಂಗ್ಸ್ ನಲ್ಲಿ ಅಸ್ಸಾಂ 264 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಅಮಿತ್ ವರ್ಮ 74, ರಾಹುಲ್ ಹಜಾರಿಕಾ 44, ಸ್ವರೂಪಮ್ 33, ತರ್ಜಿಂದರ್ ಸಿಂಗ್ 26 ರನ್ ಗಳಿಸಿದರೆ, ರಾಜ್ಯದ ಪರವಾಗಿ ಕೆ. ಗೌತಮ್ ಅಮೋಘ ಪ್ರದರ್ಶನ ನೀಡಿ 7 ವಿಕೆಟ್ ಕಬಳಿಸಿದ್ದಾರೆ.

20 ರನ್ ಗೆಲುವಿನ ಗುರಿ ಪಡೆದ ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೇ 3 ಓವರ್ ಗಳಲ್ಲಿ ನಿಗಧಿತ ಗುರಿ ತಲುಪಿತು. ಕರ್ನಾಟಕ ತಂಡ ನವೆಂಬರ್ 5 ರಿಂದ ವಡೋದರಾದಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...