alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರವಾಗಿ ಔಟಾದ ರಾಜಸ್ಥಾನ ರಾಯಲ್ಸ್ ಆಟಗಾರ

ಕ್ರಿಕೆಟ್ ನಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಔಟಾಗ್ತಾರೆ. ಕೆಲವರು ಕ್ಯಾಚ್ ಕೊಟ್ರೆ, ಇನ್ನು ಕೆಲವರು ಬೋಲ್ಡ್ ಆಗ್ತಾರೆ. ಮತ್ತೆ ಕೆಲವರು ರನ್ ಔಟ್ ಆಗ್ತಾರೆ. ಆದ್ರೆ ಮೊನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ಪಂದ್ಯದಲ್ಲಿ ಆರ್ ಆರ್ ತಂಡದ ಆಟಗಾರ ಈಶ್ ಸೋಧಿ ವಿಚಿತ್ರವಾಗಿ ಔಟ್ ಆಗಿದ್ದಾರೆ. ಈತ ಔಟಾಗಿದ್ದು, ಆಟಗಾರರಿಗಷ್ಟೇ ಅಲ್ಲದೆ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೂ ವಿಚಿತ್ರವೆನಿಸಿದೆ.

ಆರಂಭದಲ್ಲೇ ಉತ್ತಮ ಆಟ ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾದ ತ್ರಿಪಾಠಿ ಹಾಗೂ ಬಟ್ಲರ್ 2 ನೇ ಓವರ್ ನಲ್ಲಿ 19 ರನ್ ಗಳಿಸಿದ್ರು. 3ನೇ ಓವರ್ ನಲ್ಲಿ 28 ರನ್ ಗಳಿಸಿ ಬೃಹತ್ ಮೊತ್ತದ ಆಸೆ ಚಿಗುರಿಸಿದ್ರು.

ಆದರೆ 5ನೇ ಓವರ್‌ನಿಂದ ದಾಳಿಗಿಳಿದ ಕುಲದೀಪ್‌, ತಾವೆಸೆದ 4 ಓವರ್‌ಗಳಲ್ಲೂ ಒಂದೊಂದು ವಿಕೆಟ್‌ ಪಡೆದು ರಾಜಸ್ಥಾನ ತಂಡಕ್ಕೆ ಆಘಾತ ನೀಡಿದರು. ಇವರಿಗೆ ಸಾಥ್ ನೀಡಿದ ರಸೆಲ್ 2 ವಿಕೆಟ್ ಪಡೆದರು. ನಂತರ ಆರ್ ಆರ್ ತಂಡದಿಂದ ಬ್ಯಾಟಿಂಗ್ ಗೆ ಇಳಿದ ಈಶ್ ಸೋಧಿ ಉತ್ತಮ ಆಟ ಪ್ರದರ್ಶಿಸುತ್ತಿದ್ರು. ಈ ವೇಳೆ 17 ಓವರ್ ಗೆ ಬಂದ ಪ್ರಸಿದ್ಧ ಕೃಷ್ಣ, ಸೋಧಿಗೆ ಬೌಲಿಂಗ್ ಮಾಡಿದ್ರು. ಆಗ ಸೋಧಿ ತನ್ನ ಬ್ಯಾಟ್ ಅಂಚಿನಿಂದ ಬಾಲ್ ಹೊಡೆದಿದ್ದಾರೆ. ಆಗ ಬಾಲ್ ಸೋಧಿಯ ಪಾದ ತಾಕಿ ವಿಕೆಟ್ ಕೀಪರ್ ಕೈ ತಲುಪಿ ಔಟಾಗಿದ್ದಾರೆ.

ಆನ್ ಫೀಲ್ಡ್ ಅಂಪೈರ್ ಕೂಡಾ ಸೋಧಿ ಔಟಾದ ಬಗ್ಗೆ ಖಚಿತಪಡಿಸಲಾಗಲಿಲ್ಲ. ಥರ್ಡ್ ಅಂಪೈರ್ ನಲ್ಲಿ ಗೊಂದಲ ಸೃಷ್ಟಿಯಾಗಿ, ಕೊನೆಗೆ ಸೋಧಿ ಔಟ್ ಎಂದು ತಿಳಿಸಿದ್ರು. ಈ ಮೂಲಕ ಕೆಕೆಆರ್ ತಂಡಕ್ಕೆ ರಾಜಸ್ತಾನ್ ರಾಯಲ್ಸ್ ಸುಲಭ ತುತ್ತಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...