alex Certify
ಕನ್ನಡ ದುನಿಯಾ       Mobile App
       

Kannada Duniya

ದ್ರಾವಿಡ್ ಬಯೋಪಿಕ್ ಗೆ ಹೀರೋ ಆಗ್ಬೇಕಂತೆ ಈ ನಟ

ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಅಜರುದ್ದೀನ್ ನಂತ್ರ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಜೀವನ ಚರಿತ್ರೆ ತೆರೆ ಮೇಲೆ ಬರುವ ಸಾಧ್ಯತೆಯಿದೆ. ಭಾರತದ ಅಂಡರ್-19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಸಂದರ್ಶನವೊಂದರಲ್ಲಿ ತಮ್ಮಿಷ್ಟವನ್ನು ಎಲ್ಲರ ಮುಂದಿಟ್ಟಿದ್ದಾರೆ.

ನಿಮ್ಮ ಬಯೋಪಿಕ್ ನಲ್ಲಿ ಯಾರನ್ನು ನಿಮ್ಮ ಸ್ಥಾನದಲ್ಲಿ ನೋಡಲು ಬಯಸ್ತಿರಾ ಎಂಬ ಪ್ರಶ್ನೆಗೆ ರಾಹುಲ್ ದ್ರಾವಿಡ್ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಹೆಸರು ಹೇಳಿದ್ದಾರೆ. ಬಾಲಿವುಡ್ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಅನ್ನೋದು ಎಲ್ಲ ಅಭಿಮಾನಿಗಳಿಗೆ ಗೊತ್ತು.

ರಾಹುಲ್ ದ್ರಾವಿಡ್ ಅಭಿಮಾನಿಗಳು ಕೂಡ ದ್ರಾವಿಡ್ ಅವ್ರನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೀತಾರೆ. ಜ್ಯಾಮ್ಮಿ, ವಾಲ್ ಹಾಗೂ ಮಿಸ್ಟರ್ ಫರ್ಫೆಕ್ಟ್ ಎಂದು ಕರೆಯುತ್ತಾರೆ. ಸಂದರ್ಶನದಲ್ಲಿ ದ್ರಾವಿಡ್ ಸುಮಾರು 25 ಪ್ರಶ್ನೆಗಳಿಗೆ ಉತ್ತರ ನೀಡಿದ್ರು. ಈವರೆಗೆ ನಿಮ್ಮ ಜೊತೆ ಆಡಿದ ಆಟಗಾರರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಯಾವುದೇ ಹಿಂಜರಿಕೆಯಿಲ್ಲದೆ ದ್ರಾವಿಡ್ ಸಚಿನ್ ತೆಂಡೂಲ್ಕರ್ ಹೆಸರು ಹೇಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...