alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್-19 ತಂಡಕ್ಕೆ ಇನ್ನೆರಡು ವರ್ಷ ದ್ರಾವಿಡ್ ಕೋಚ್..!

vbk-04-dravid_1542141f

ಭಾರತ ಅಂಡರ್ – 19 ಹಾಗೂ ಇಂಡಿಯಾ-ಎ ತಂಡದ ತರಬೇತುದಾರರಾಗಿ ಇನ್ನು 2 ವರ್ಷಗಳ ಕಾಲ ರಾಹುಲ್ ದ್ರಾವಿಡ್ ಅವರೇ ಮುಂದುವರಿಯುವ ಸಾಧ್ಯತೆ ಇದೆ. ದ್ರಾವಿಡ್ ಅಧಿಕಾರಾವಧಿಯನ್ನು ಇನ್ನೆರಡು ವರ್ಷ ವಿಸ್ತರಿಸಲು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ನಿರ್ಧರಿಸಿದೆ. ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಈ ಸಮಿತಿಯ ಸದಸ್ಯರಾಗಿದ್ದಾರೆ.

ದ್ರಾವಿಡ್ ಸಾರಥ್ಯದಲ್ಲಿ ಭಾರತ ಅಂಡರ್-19 ಕ್ರಿಕೆಟ್ ತಂಡ ಕಳೆದ ವರ್ಷ ಐಸಿಸಿ ವಿಶ್ವಕಪ್ ಫೈನಲ್ ಗೆ ತಲುಪಿತ್ತು. ದ್ರಾವಿಡ್ ತರಬೇತಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಕೋಚ್ ಹುದ್ದೆಗಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿಲ್ಲ, ಅವರನ್ನೇ ಮುಂದುವರಿಸಲು ನಿರ್ಧರಿಸಿದೆ ಎನ್ನಲಾಗ್ತಿದೆ.

ಕಳೆದ 10 ತಿಂಗಳುಗಳಲ್ಲಿ ದ್ರಾವಿಡ್ ಬಿಸಿಸಿಐನಿಂದ 4 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. ಇತ್ತೀಚೆಗಷ್ಟೆ ಪ್ರಮುಖ ಆಟಗಾರರು ಮತ್ತು ತರಬೇತುದಾರರ ವೇತನದ ಬಗ್ಗೆ ಆಡಳಿತಾಧಿಕಾರಿಗಳ ಸಮಿತಿಯ ಮಾಜಿ ಸದಸ್ಯ ರಾಮಚಂದ್ರ ಗುಹಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ಕೊಡಬೇಕಿದೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...