alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಡ್ರೆಸ್ಸಿಂಗ್ ರೂಂಗೆ ಹೋಗಿಲ್ಲ – ಸ್ಪಷ್ಟನೆ ನೀಡಿದ ದ್ರಾವಿಡ್

ಅಂಡರ್ 19 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಭಾರತಕ್ಕೆ ವಾಪಸ್ ಆಗಿದೆ. ಸೋಮವಾರ ನ್ಯೂಜಿಲ್ಯಾಂಡ್ ನಿಂದ ಆಟಗಾರರು ಮುಂಬೈಗೆ ಬಂದಿದ್ದಾರೆ. ಭಾರತಕ್ಕೆ ವಾಪಸ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಪ್ರಥ್ವಿ ಶಾ ವಿಶ್ವಕಪ್ ನ ಅನುಭವಗಳನ್ನು ಹಂಚಿಕೊಂಡರು.

ಪತ್ರಕಾರರ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್ ಪಾಕಿಸ್ತಾನ ಆಟಗಾರರ ಡ್ರೆಸ್ಸಿಂಗ್ ರೂಂಗೆ ಹೋಗಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಕರಾಚಿಯಲ್ಲಿ ಮಾತನಾಡಿದ್ದ ಪಾಕಿಸ್ತಾನದ ಅಂಡರ್ 19 ತಂಡದ ಮ್ಯಾನೇಜರ್ ನದೀಮ್ ಖಾನ್, ರಾಹುಲ್ ದ್ರಾವಿಡ್ ಡ್ರೆಸ್ಸಿಂಗ್ ರೂಮ್ ಗೆ ಬಂದು ಆಟಗಾರರನ್ನು ಪ್ರೋತ್ಸಾಹಿಸಿದ್ದರು ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಸ್ಪಷ್ಟನೆ ನೀಡಿದ ದ್ರಾವಿಡ್, ನಾನು ಡ್ರೆಸ್ಸಿಂಗ್ ರೂಮ್ ಗೆ ಹೋಗಿಲ್ಲ. ಪಾಕಿಸ್ತಾನದ ಎಡಗೈ ಬೌಲರ್ ಒಬ್ಬರಿಗೆ ಶುಭಕೋರಿದ್ದೆ. ಪಂದ್ಯಾವಳಿಯಲ್ಲಿ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದರು. ಹಾಗಾಗಿ ಅವರಿಗೆ ಶುಭಕೋರಿದ್ದೆ. ಆದ್ರೆ ಪಾಕಿಸ್ತಾನ ಡ್ರೆಸ್ಸಿಂಗ್ ರೂಮ್ ಗೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...