alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್-19 ತಂಡದ ಕೋಚ್ ದ್ರಾವಿಡ್ ಗೆ ಬಿಸಿಸಿಐ ಕೊಟ್ಟಿರೋ ವೇತನವೆಷ್ಟು?

ವಿಶ್ವಕಪ್ ಗೆದ್ದಿರುವ ಭಾರತ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ನೀಡಿರುವ ವೇತನ ಎಷ್ಟು ಗೊತ್ತಾ? 6 ತಿಂಗಳ ಅವಧಿಗೆ ಬಿಸಿಸಿಐ ದ್ರಾವಿಡ್ ಗೆ 2.47 ಕೋಟಿ ರೂಪಾಯಿ ನೀಡಿದೆ. ಆಗಸ್ಟ್ ನಿಂದ ನವೆಂಬರ್ ವರೆಗೆ 4 ತಿಂಗಳ ಅವಧಿಗಾಗಿ ಪ್ರೊಫೆಶನಲ್ ಶುಲ್ಕ 27 ಲಕ್ಷ ರೂಪಾಯಿ ನೀಡಲಾಗಿದೆ.

ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ಆಶಿಶ್ ನೆಹ್ರಾಗೆ ಬಿಸಿಸಿಐ 60 ಲಕ್ಷ ರೂಪಾಯಿ ಕೊಟ್ಟಿದೆ. ಕಳೆದ ವರ್ಷ ಅಜಿಂಕ್ಯಾ ರಹಾನೆಗೆ 1.47 ಕೋಟಿ, ಹಾರ್ದಿಕ್ ಪಾಂಡ್ಯಗೆ 1.27 ಕೋಟಿ, ಕುಲದೀಪ್ ಯಾದವ್ ಗೆ 1.08 ಕೋಟಿ, ವೃದ್ಧಿಮಾನ್ ಸಹಾಗೆ 57.81 ಲಕ್ಷ, ಅಭಿನವ್ ಮುಕುಂದ್ ಗೆ 33.69 ಲಕ್ಷ ರೂಪಾಯಿ ದೊರೆತಿದೆ.

ಕಳೆದೆರಡು ಆವೃತ್ತಿಗಳಲ್ಲಿ J & Kಗೆ ಹೆಡ್ ಕೋಚ್ ಆಗಿದ್ದ ದೆಹಲಿ ಕ್ರಿಕೆಟಿಗ ಮಿಥುನ್ ಮಿನ್ಹಾಸ್ ಗೆ ಕೂಡ ಬಿಸಿಸಿಐ 75.60 ಲಕ್ಷ ರೂಪಾಯಿ ನೀಡಿದೆ. ಕಮೆಂಟೇಟರ್ ಗಳಾದ ಸಂಜಯ್ ಮಾಂಜ್ರೇಕರ್ ಗೆ 36.28 ಹಾಗೂ ಮುರುಳಿ ವಿಜಯ್ ಗೆ 30.61 ಲಕ್ಷ ರೂಪಾಯಿ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...