alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಎಫ್ ಸಿ ತಂಡಕ್ಕೆ ಬಲ ತುಂಬಿದ ದ್ರಾವಿಡ್

ಇಂಡಿಯನ್ ಸೂಪರ್ ಲೀಗ್ ಗೆ ಕೇವಲ ಒಂದು ವಾರ ಬಾಕಿ ಇದೆ. ಬೆಂಗಳೂರು ಎಫ್ ಸಿ ತಂಡ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ. ಬ್ಲ್ಯೂಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರೋದು ಸಖತ್ ಖುಷಿಕೊಟ್ಟಿದೆ ಅಂತಾ ದ್ರಾವಿಡ್ ಕೂಡ ತಿಳಿಸಿದ್ದಾರೆ.

ತಾವು ಮೂಲತಃ ಬೆಂಗಳೂರಿನವರೇ ಆಗಿದ್ದರಿಂದ ಈ ತಂಡದ ಜೊತೆಗೆ ನಂಟಿದೆ ಅಂತಾ ಹೇಳಿದ್ದಾರೆ. ಬೆಂಗಳೂರು ಎಫ್ ಸಿ ತಂಡ ಕಳೆದ ನಾಲ್ಕು ಆವೃತ್ತಿಗಳಲ್ಲೂ ಉತ್ತಮ ಪ್ರದರ್ಶನ ತೋರಿದೆ. ತಂಡದಲ್ಲಿ ವೃತ್ತಿಪರತೆಯಿದೆ. ಸಾಕಷ್ಟು ಅಭಿಮಾನಿಗಳನ್ನು ಕೂಡ ತಂಡ ಹೊಂದಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಬ್ರಾಂಡ್ ಅಂಬಾಸಿಡರ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಸೂಕ್ತ ಆಯ್ಕೆ ಅಂತಾ ಬೆಂಗಳೂರು ಎಫ್ ಸಿ ಸಿಇಓ ಪಾರ್ಥ ಜಿಂದಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ತಂಡಕ್ಕೆ ಉತ್ತಮ ಪ್ರೇರಣೆಯಾಗ್ತಾರೆ ಅನ್ನೋ ವಿಶ್ವಾಸ ಅವರಿಗಿದೆ. ನವೆಂಬರ್ 19ರಂದು ಮುಂಬೈ ಸಿಟಿ ಎಫ್ ಸಿ ವಿರುದ್ಧ ಬೆಂಗಳೂರು ಎಫ್ ಸಿ ಮೊದಲ ಪಂದ್ಯ ಆಡಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...