alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನನಷ್ಟ ಮೊಕದ್ದಮೆ ಗೆದ್ದ ನಡಾಲ್ ಗೆ ಸಿಗಲಿದೆ ಇಷ್ಟು ಮೊತ್ತ

ಸ್ಪೇನ್ ದಿಗ್ಗಜ ಟೆನಿಸ್ ಆಟಗಾರ ರೆಫೆಲ್ ನಡಾಲ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಫ್ರೆಂಚ್ ನ ಮಾಜಿ ಕ್ರೀಡಾ ಸಚಿವ ರೊಸಾಲಿನ್ ಬಾಚ್ಲಾಟ್ ವಿರುದ್ಧ ಕಾನೂನು ಹೋರಾಟದಲ್ಲಿ ನಡಾಲ್ಗೆ ಜಯ ಸಿಕ್ಕಿದೆ. ನಡಾಲ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಸಿ ಕೋರ್ಟ್ ಬಾಚ್ಲಾಟ್ ಗೆ ದಂಡ ವಿಧಿಸಿದೆ. ನಡಾಲ್ ಗೆ 14 ಸಾವಿರ ಡಾಲರ್ ನೀಡುವಂತೆ ಕೋರ್ಟ್ ಆದೇಶ ನೀಡಿದೆ.

ಕಳೆದ ವರ್ಷ ಟಿವಿ ಕಾರ್ಯಕ್ರಮವೊಂದರಲ್ಲಿ ಬಾಚ್ಲಾಟ್ ನಡಾಲ್ ವಿರುದ್ಧ  ಡೋಪಿಂಗ್ ಆರೋಪ ಹೊರಿಸಿದ್ದರು. ಈ ಸಂಬಂಧ ನಡಾಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 100,000 ಯುರೋ ನೀಡಬೇಕೆಂದು ನಡಾಲ್ ಬೇಡಿಕೆಯಿಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ಯಾರಿಸ್ ನ್ಯಾಯಾಲಯ ಬಾಚ್ಲಾಟ್ ರನ್ನು ದೋಷಿ ಎಂದು ಪರಿಗಣಿಸಿದೆ. ಬಾಚ್ಲಾಟ್ 500 ಯುರೋ ನೀಡಬೇಕೆಂದು ಆದೇಶ ನೀಡಿದೆ.

ಬಂದ ಹಣವನ್ನು ಫ್ರಾನ್ಸ್ ಚಾರಿಟಿಗೆ ನೀಡುವುದಾಗಿ ನಡಾಲ್ ಹೇಳಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆದಿತ್ತು. ಕ್ರೀಡಾಪಟುವಾಗಿ ಮಾತ್ರ ಈ ಹೋರಾಟವಾಗಿರಲಿಲ್ಲ. ನನ್ನ ವೃತ್ತಿಜೀವನದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಕೋರ್ಟ್ ಮೊರೆ ಹೋಗಿದ್ದೆ ಎಂದು ನಡಾಲ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...