alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಸಾಧನೆ ಮಾಡಿದ ವಿನಯ್ ಕುಮಾರ್

vinay-kum

ಮೊಹಾಲಿ: ಮೊಹಾಲಿಯಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ, ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ 10 ವಿಕೆಟ್ ಗಳ ಅಂತರದ ಜಯ ಗಳಿಸಿದೆ.

ಇದರೊಂದಿಗೆ ಆರ್. ವಿನಯ್ ಕುಮಾರ್ ಸಾಧನೆಯೊಂದನ್ನು ಮಾಡಿದ್ದಾರೆ. ರಣಜಿ ಕ್ರಿಕೆಟ್ ನಲ್ಲಿ 2000 ಕ್ಕಿಂತಲೂ ಹೆಚ್ಚು ರನ್ ಹಾಗೂ 350 ಕ್ಕಿಂತಲೂ ಹೆಚ್ಚು ವಿಕೆಟ್ ಗಳಿಸಿದ ರಾಜ್ಯದ 2 ನೇ ಆಟಗಾರ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.

ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅಜೇಯ 56 ರನ್ ಗಳಿಸಿದ ವಿನಯ್ ಕುಮಾರ್, 2000 ರನ್ ಕಲೆ ಹಾಕಿದ್ದಾರೆ. 90 ಪಂದ್ಯಗಳನ್ನಾಡಿರುವ ಅವರು 354 ವಿಕೆಟ್ ಗಳಿಸಿದ್ದಾರೆ. ಕರ್ನಾಟಕದ ತಂಡದ ಸ್ಪಿನ್ನರ್ ಆಗಿದ್ದ ಸುನೀಲ್ ಜೋಶಿ 117 ಪಂದ್ಯಗಳನ್ನಾಡಿ 4116 ರನ್, 479 ವಿಕೆಟ್ ಗಳಿಸಿದ್ದಾರೆ.

ರಣಜಿ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದೇಶದ ವೇಗದ ಬೌಲರ್ ಗಳಲ್ಲಿ ವಿನಯ್ ಕುಮಾರ್ ಮೊದಲಿಗರಾಗಿದ್ದಾರೆ. ವಿನಯ್ ಕುಮಾರ್ 354 ವಿಕೆಟ್ ಗಳಿಸಿದ್ದು, ಪಂಜಾಬ್ ವೇಗದ ಬೌಲರ್ ಮದನ್ ಲಾಲ್ 107 ಪಂದ್ಯಗಳಿಂದ 351 ವಿಕೆಟ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...