alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ವಿ. ಸಿಂಧುಗೆ ವಿಮಾನ ಸಿಬ್ಬಂದಿಯಿಂದ ಕಿರುಕುಳ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ರಿಯೋ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರೊಂದಿಗೆ ಇಂಡಿಗೋ ವಿಮಾನ ಸಿಬ್ಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಖುದ್ದು ಪಿ.ವಿ. ಸಿಂಧು ಶನಿವಾರದಂದು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಿ.ವಿ. ಸಿಂಧುರವರು ಇಂಡಿಗೋ ವಿಮಾನ 6E 608 ರಲ್ಲಿ ಮುಂಬೈಗೆ ತೆರಳುತ್ತಿದ್ದು, ಈ ವೇಳೆ ಗ್ರೌಂಡ್ ಸ್ಟಾಪ್ ಅಜಿತೇಶ್ ಎಂಬಾತ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನು ಗಮನಿಸಿದ ವಿಮಾನದ ಗಗನಸಖಿ ಅಶಿಮಾ ಪ್ರಯಾಣಿಕರೊಂದಿಗೆ ಇಂತಹ ವರ್ತನೆ ಸಲ್ಲದು ಎಂದಿದ್ದಾರೆ. ಆಗ ಅಜಿತೇಶ್ ಆಕೆಯ ವಿರುದ್ದವೂ ತಿರುಗಿ ಬಿದ್ದಿದ್ದಾನೆ.

ತಮಗಾದ ಕಹಿ ಅನುಭವವನ್ನು ಪಿ.ವಿ. ಸಿಂಧು ಸರಣಿ ಟ್ವೀಟ್ ಗಳ ಮೂಲಕ ಹಂಚಿಕೊಂಡಿದ್ದು, ವಿಮಾನ ಸಿಬ್ಬಂದಿ ತೋರಿದ ದುರ್ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಪಿ.ವಿ. ಸಿಂಧು ಅವರ ಕ್ಷಮೆ ಯಾಚಿಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...