alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಮನೆಗೆ ಪೇಪರ್ ಹಾಕಿ ಬದುಕ್ತಿದ್ದಾನೆ ಬಾಕ್ಸಿಂಗ್ ಚಾಂಪಿಯನ್

boxer-akshay-mare_250b9362-7369-11e7-a83f-2f06dfe08b4c

ಪುಣೆಯ 22ರ ಹರೆಯದ ಯುವಕ ಅಕ್ಷಯ್ ಮಾರೆ ರಾಷ್ಟ್ರೀಯ ಮಟ್ಟದ ಬಾಕ್ಸರ್. ಈ ಹಿಂದೆ ಪ್ರಶಸ್ತಿ ಕೂಡ ಗೆದ್ದಿದ್ದಾನೆ. ಆದ್ರೆ ಬಾಕ್ಸಿಂಗ್ ಮುಂದುವರಿಸಲು ಬೇಕಾದ ಫಿಟ್ನೆಸ್ ಕಾಪಾಡಿಕೊಳ್ಳಲು ಡಯಟ್ ಮಾಡ್ಬೇಕು. ಅದಕ್ಕೆ ಹಣ ಬೇಕು. ತೀರಾ ಬಡ ಕುಟುಂಬದಿಂದ ಅಕ್ಷಯ್ ಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

ಬೇರೆ ದಾರಿ ಕಾಣದೆ ಅಕ್ಷಯ್ ಈಗ ಮನೆ ಮನೆಗೆ ಪೇಪರ್ ಹಾಕಿ ನಾಲ್ಕು ಕಾಸು ಸಂಪಾದಿಸ್ತಾನೆ. ಅಕ್ಷಯ್ ರಾಷ್ಟ್ರಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 4 ಚಿನ್ನದ ಪದಕಗಳನ್ನು ಗೆದ್ದಿದ್ದಾನೆ.

ಸ್ಲಮ್ ಏರಿಯಾದ ಪುಟ್ಟ ಮನೆಯಲ್ಲಿ ಅಕ್ಷಯ್, ಆತನ ತಂದೆ ಮತ್ತು ಇಬ್ಬರು ಸಹೋದರರು ವಾಸಿಸ್ತಾರೆ. ಸೂರ್ಯ ಹುಟ್ಟುವ ಮುನ್ನವೇ ಇದ್ದು 4 ಕಿಮೀ ದೂರದಲ್ಲಿರುವ ಪೇಪರ್ ಡಿಸ್ಟ್ರಿಬ್ಯೂಶನ್ ಸೆಂಟರ್ ಗೆ ಬರ್ತಾನೆ. ಕಳೆದ 8 ವರ್ಷಗಳಿಂದ ದತ್ತವಾಡಿಯಲ್ಲಿ ಅಕ್ಷಯ್ ಪೇಪರ್ ಹಂಚೋ ಕೆಲಸ ಮಾಡ್ತಿದ್ದಾನೆ.

ಆತನ ಸಹೋದರ ವಿಶಾಲ್ ಮನೆಮನೆಗೆ ಹಾಲು ಹಾಕ್ತಾನೆ. ಪೇಪರ್ ಹಂಚಿ ಮನೆಗೆ ಬಂದವನೇ ಅಕ್ಷಯ್ ಅರುಣ್ ಕುಮಾರ್ ವೈದ್ಯ ಕ್ರೀಡಾಂಗಣಕ್ಕೆ ತೆರಳಿ ಅಭ್ಯಾಸ ಮಾಡ್ತಾನೆ. ಇಂತಹ ಪ್ರತಿಭಾವಂತ ಬಾಕ್ಸರ್ ಗೆ ಸೂಕ್ತ ತರಬೇತಿ ಪಡೆಯಲು ಆರ್ಥಿಕ ನೆರವು ಸಿಗುತ್ತಿಲ್ಲ ಅನ್ನೋದೇ ವಿಪರ್ಯಾಸ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...