alex Certify
ಕನ್ನಡ ದುನಿಯಾ       Mobile App
       

Kannada Duniya

ಚೇತೇಶ್ವರ್ ಪೂಜಾ ಫಲಕ್ಕೆ ಇನ್ನಿಂಗ್ಸ್ ಮುನ್ನಡೆಯ ಗೌರವ

ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಗಳಿಸುವಲ್ಲಿ ಪರದಾಡಿದ್ದ ಚೇತೇಶ್ವರ್ ಪೂಜಾರ, ಕೊನೆಗೆ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ. ಸೌಥಾಂಪ್ಟನ್ ನ ರೋಸ್ ಬೌಲ್ ಅಂಗಳದಲ್ಲಿ ಮನಮೋಹಕ ಇನ್ನಿಂಗ್ಸ್ ಕಟ್ಟಿ, ಟೀಮ್ ಇಂಡಿಯಾ ಮುನ್ನಡೆಗೆ ಕಾರಣರಾಗಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸುಮಾರು 9 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರಂಕಿ ಮೊತ್ತ ದಾಟಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಟೆಸ್ಟ್ ನಿಂದ ಇವರನ್ನು ಕೈ ಬಿಡಲಾಗಿತ್ತು. ಎರಡನೇ ಟೆಸ್ಟ್ ನಲ್ಲಿ ಸ್ಥಾನ ಲಭಿಸಿದಾಗ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಪರಿಣಾಮ ಇವರ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ನಿನ್ನೆ ಪೂಜಾರ ತಮ್ಮ ಮೇಲಿನ ಟೀಕೆಗಳಿಗೆ, ಶತಕ ಬಾರಿಸಿ ಉತ್ತರ ನೀಡಿದ್ದಾರೆ.

ಕೌಂಟಿ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಪೂಜಾರ, ನಿರ್ಣಾಯಕ ಪಂದ್ಯದಲ್ಲಿ ಫಾರ್ಮ್ ಗೆ ಮರಳಿರೋದು ತಂಡಕ್ಕೆ ಪ್ಲಸ್ ಪಾಯಿಂಟ್. ಮೊದಲ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಪೂಜಾರ ಆಟ ಮಹತ್ವದಾಗಿದೆ. ಒಂದು ಹಂತದಲ್ಲಿ 195 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾ ಇನ್ನಿಂಗ್ಸ್ ಹಿನ್ನಡೆಯ ಭೀತಿ ಅನುಭವಿಸುತ್ತಿತ್ತು. ಈ ವೇಳೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಜೊತೆ ಇನ್ನಿಂಗ್ಸ್ ಕಟ್ಟಿದ ಪೂಜಾರ ಆಟಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ 15ನೇ ಶತಕ ಬಾರಿಸಿದ ಪೂಜಾರ, ಕೊನೆಯವರೆಗೂ, ಕ್ರೀಸ್ ನಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಮಾಡಿದ್ರು. ಪೂಜರಾ, 257 ಎಸೆತಗಳಲ್ಲಿ 16 ಸೊಗಸಾದ ಬೌಂಡರಿಗಳ ನೆರವಿನಿಂದ 132 ರನ್ ಬಾರಿಸಿ ಅಜೇಯರಾಗುಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...