alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆ ಟಿ20 ದಾಖಲೆ ಮುರಿದ ಪಾಕಿಸ್ತಾನದ ಯುವ ಬೌಲರ್

ಪಾಕಿಸ್ತಾನ ಸೂಪರ್ ಲೀಗ್ ಗೆ ಹೇಳಿಕೊಳ್ಳುವಂತಹ ಜನಪ್ರಿಯತೆಯೇನೂ ಸಿಕ್ಕಿಲ್ಲ. ಲಾಹೋರ್ ಕ್ವಲಂಡರ್ಸ್ ತಂಡವಂತೂ ಸತತ 6 ಪಂದ್ಯಗಳನ್ನು ಸೋತಿದೆ. ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಸೋಲಿಗೆ ಕಳಪೆ ಬೌಲಿಂಗ್ ಕಾರಣ ಎನ್ನುತ್ತಿದ್ದಾರೆ ನಾಯಕ ಬ್ರೆಂಡನ್ ಮೆಕಲಂ.

ಆದ್ರೆ ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಪಂದ್ಯದಲ್ಲಿ ಲಾಹೋರ್ ತಂಡದ ಬೌಲರ್, 17 ವರ್ಷದ ಶಹೀನ್ ಅಫ್ರಿದಿ ಮ್ಯಾಜಿಕ್ ಮಾಡಿದ್ದಾರೆ. ದಾಖಲೆಯ 5 ವಿಕೆಟ್ ಪಡೆಯುವ ಮೂಲಕ, ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. 3.4 ಓವರ್ ಬೌಲಿಂಗ್ ಮಾಡಿದ ಶಹೀನ್, 4 ರನ್ ನೀಡಿ 5 ವಿಕೆಟ್ ಪಡೆದ್ರು.

ಈ ಮೂಲಕ 10 ವರ್ಷಗಳ ಹಿಂದೆ ಟಿ-20ಯಲ್ಲಿ ಅನಿಲ್ ಕುಂಬ್ಳೆ ಮಾಡಿದ ದಾಖಲೆಯನ್ನು ಶಹೀನ್ ಮುರಿದಿದ್ದಾರೆ. 2009ರಲ್ಲಿ ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 5 ರನ್ ನೀಡಿ 5 ವಿಕೆಟ್ ಪಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...