alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್- ಅನುಷ್ಕಾ ಪ್ಯಾಚ್ ಅಪ್ ಗೆ ಇಲ್ಲಿದೆ ಪ್ರೂಫ್

virat twitterಕಳೆದ ಎರಡು ವರ್ಷಗಳಿಂದ ಜೋಡಿ ಹಕ್ಕಿಗಳಂತೆ ವಿಹರಿಸುತ್ತಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಕಳೆದ ಫೆಬ್ರವರಿಯಲ್ಲಿ ಪರಸ್ಪರ ದೂರವಾಗಿದ್ದರು. ಈ ಕುರಿತು ಇಬ್ಬರು ಯಾವುದೇ ಹೇಳಿಕೆ ನೀಡಲಿಲ್ಲವಾದರೂ ಅವರಿಬ್ಬರ ವರ್ತನೆ ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಬಿರುಕು ಬಿಟ್ಟ ಸಂಬಂಧವನ್ನು ಮತ್ತೇ ಸರಿಪಡಿಸಲು ವಿರಾಟ್ ಯತ್ನಿಸುತ್ತಿದ್ದಾರೆಂದು ಹೇಳಲಾಗಿತ್ತಾದರೂ ಅದಕ್ಕೆ ಅನುಷ್ಕಾ ಒಪ್ಪಿಲ್ಲವೆಂಬ ಮಾತುಗಳು ಕೇಳಿ ಬಂದಿದ್ದವು. ವಿರಾಟ್ ಮದುವೆ ಪ್ರಸ್ತಾಪವನ್ನು ಮುಂದಿಟ್ಟ ವೇಳೆ ತನ್ನ ವೃತ್ತಿ ಜೀವನದ ಕಾರಣವೊಡ್ಡಿ ಅನುಷ್ಕಾ ಸದ್ಯಕ್ಕೆ ವಿವಾಹ ಬೇಡವೆಂದು ನಿರಾಕರಿಸಿದ್ದೇ ಇಬ್ಬರ ನಡುವಿನ ವಿರಸಕ್ಕೆ ಕಾರಣವೆಂದು ಗುಸು ಗುಸು ಹರಡಿತ್ತು.

ಇದೀಗ ಇಬ್ಬರೂ ಮತ್ತೇ ಒಂದಾಗಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಇತ್ತೀಚೆಗೆ ಇಬ್ಬರೂ ಮುಂಬೈನ ಪ್ರತಿಷ್ಟಿತ ರೆಸ್ಟೋರೆಂಟ್ ಒಂದರಲ್ಲಿ ಜೊತೆಗೆ ಕಾಣಿಸಿಕೊಂಡಿದ್ದರು. ಇದಕ್ಕೆ ಇನ್ನಷ್ಟು ಪ್ರೂಫ್ ಎಂಬಂತೆ ಬೇರ್ಪಟ್ಟ ಬಳಿಕ ಅನುಷ್ಕಾ ಶರ್ಮಾ, ಟ್ವಿಟ್ಟರ್ ಅಕೌಂಟನ್ನು ಅನ್ ಫಾಲೋ ಮಾಡಿದ್ದ ವಿರಾಟ್ ಕೊಹ್ಲಿ ಈಗ ಮತ್ತೇ ಫಾಲೋ ಮಾಡುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಲ್ಲೂ ಹರ್ಷ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...