alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಶುರುವಾಗಲಿದೆ ಪ್ರೊ ಕಬಡ್ಡಿ ಲೀಗ್

kabadi-d

ಪ್ರೊ ಕಬಡ್ಡಿ ಲೀಗ್ 5 ನೇ ಆವೃತ್ತಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ಹೈದರಾಬಾದ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ತಮಿಳು ತಲೈವಾಸ್ ತಂಡಗಳು ಮುಖಾಮುಖಿಯಾಗಲಿವೆ.

2 ನೇ ಪಂದ್ಯದಲ್ಲಿ ಯು ಮುಂಬಾ ಹಾಗೂ ಪುಣೇರಿ ಪಲ್ಟನ್ ನಡುವೆ ಪೈಪೋಟಿ ನಡೆಯಲಿದೆ. ಈ ಬಾರಿ ಪ್ರೊ ಕಬಡ್ಡಿ ಲೀಗ್ ಆತಿಥ್ಯವನ್ನು ಹೈದರಾಬಾದ್, ನಾಗ್ ಪುರ, ಅಹಮದಾಬಾದ್, ಲಖ್ನೋ, ಮುಂಬೈ, ಕೋಲ್ಕತ್ತಾ, ಸೋನೆಪತ್, ರಾಂಚಿ, ನವದೆಹಲಿ, ಚೆನ್ನೈ, ಜೈಪುರ, ಪುಣೆ ನಗರಗಳು ವಹಿಸಿಕೊಂಡಿವೆ.

‘ಎ’ ಜೋನ್ ನಲ್ಲಿ ದಬಾಂಗ್ ದೆಲ್ಲಿ, ಗುಜರಾತ್ ಫಾರ್ಚೂನ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಪುಣೇರಿ ಪಲ್ಟನ್ ಯು ಮುಂಬಾ ತಂಡಗಳಿವೆ.

‘ಬಿ’ ಜೋನ್ ನಲ್ಲಿ ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಪಾಟ್ನಾ ಪೈರೇಟ್ಸ್, ತಮಿಳು ತಲೈವಾಸ್, ತೆಲುಗು ಟೈಟನ್ಸ್, ಯು.ಪಿ. ಯೋಧಾ ತಂಡಗಳಿವೆ.

ಬಹುಮಾನದ ಒಟ್ಟು ಮೊತ್ತ 8 ಕೋಟಿ ರೂ., ಚಾಂಪಿಯನ್ಸ್ ಗೆ 3 ಕೋಟಿ ರೂ., ರನ್ನರ್ಸ್ ಅಪ್ ತಂಡಕ್ಕೆ 1.8 ಕೋಟಿ ರೂ. ಹಾಗೂ 3 ನೇ ಸ್ಥಾನ ಪಡೆದ ತಂಡಕ್ಕೆ 1.2 ಕೋಟಿ ರೂ. ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...