alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಲ್ಲಿ ಹಣದ ಮಳೆ: ಪ್ರತಿ ದಿನ ಲಕ್ಷಾಂತರ ರೂ. ಗಳಿಸ್ತಾರೆ ಆಟಗಾರರು

ಕ್ರಿಕೆಟ್ ನ ಅತಿ ದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ 11 ಶುರುವಾಗಿದೆ. ಈಗಾಗಲೇ ಆವೃತ್ತಿಯ 8 ಪಂದ್ಯಗಳು ನಡೆದಿವೆ. ಎಲ್ಲ ಪಂದ್ಯಗಳು ರೋಚಕವಾಗಿದ್ದವು. ಪ್ರತಿ ಪಂದ್ಯದಲ್ಲಿಯೂ ಬೇರೆ ಬೇರೆ ಆಟಗಾರರು ಪಂದ್ಯ ಪುರುಷರಾಗಿ ಹೊರ ಹೊಮ್ಮಿದ್ದಾರೆ.

ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್, ಕ್ಯಾಚ್, ಫೀಲ್ಡಿಂಗ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಆಟಗಾರರು ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಪಂದ್ಯ ಪುರುಷ ಜೊತೆ ಪಂದ್ಯ ಮುಕ್ತಾಯದ ನಂತ್ರ 5 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಬಹುಮಾನ ರೂಪದಲ್ಲಿ ದೊಡ್ಡ ಮೊತ್ತವನ್ನು ಆಟಗಾರರಿಗೆ ನೀಡಲಾಗುತ್ತದೆ.

ಮೊದಲು ಹೇಳಿದಂತೆ ಪಂದ್ಯದ ನಂತ್ರ ಒಬ್ಬ ಆಟಗಾರನಿಗೆ ಪಂದ್ಯ ಪುರುಷ ಪ್ರಶಸ್ತಿ ನೀಡಲಾಗುತ್ತದೆ. ಆಟಗಾರನಿಗೆ 1 ಲಕ್ಷ ರೂಪಾಯಿಯನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತದೆ. ಇದ್ರ ಜೊತೆ ಟ್ರೋಫಿ ಕೂಡ ನೀಡಲಾಗುತ್ತದೆ. ಹಾಗೆ ಪ್ಲೇಆಫ್ ಸಮಯದಲ್ಲಿ ಪಂದ್ಯ ಪುರುಷ ಆಟಗಾರನಿಗೆ 5 ಲಕ್ಷ ರೂಪಾಯಿ ಪ್ರಶಸ್ತಿ ನೀಡಲಾಗುತ್ತದೆ.

ಪರ್ಫೆಕ್ಟ್ ಮ್ಯಾಚ್ ಆಫ್ ದಿ ಪಂದ್ಯ ಎಂದು ಒಬ್ಬ ಆಟಗಾರನಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ರೂಪದಲ್ಲಿ ಆಟಗಾರನಿಗೆ ಟ್ರೋಫಿ ಹಾಗೂ ವಿವೊ ಫೋನ್ ನೀಡಲಾಗುತ್ತದೆ.

ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರನಿಗೆ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ಎಂಬ ಪ್ರಶಸ್ತಿ ನೀಡಲಾಗುತ್ತದೆ. ಈ ಬ್ಯಾಟ್ಸ್ ಮೆನ್ ಗೆ ಟ್ರೋಫಿ ಜೊತೆ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ.

ಆವೃತ್ತಿ ಮುಗಿದ ಮೇಲೆ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ನೀಡಲಾಗುತ್ತದೆ. ಆಟಗಾರನಿಗೆ 10 ಲಕ್ಷ ರೂಪಾಯಿ, ಟ್ರೋಫಿ ಹಾಗೂ ವಿವೋ ಫೋನ್ ನೀಡಲಾಗುತ್ತದೆ.

ಬಿಸಿಸಿಐ, ಐಪಿಎಲ್ ಆವೃತ್ತಿಯ ಕೊನೆ ಪಂದ್ಯದ ನಂತ್ರ ಸ್ಟ್ರೈಕರ್ ಆಫ್ ದಿ ಸೀಸನ್ ಎಂಬ ಪ್ರಶಸ್ತಿಯನ್ನೂ ನೀಡುತ್ತದೆ. ಈ ಆಟಗಾರನಿಗೆ ಟ್ರೋಫಿ ಜೊತೆ ನಿಕ್ಸನ್ ಕಾರನ್ನು ನೀಡಲಾಗುತ್ತದೆ.

ಎಮರ್ಜಿಂಗ್ ಆಟಗಾರ ಎಂಬ ಪ್ರಶಸ್ತಿಯನ್ನೂ ಬಿಸಿಸಿಐ ನೀಡುತ್ತದೆ. ಈ ಆಟಗಾರನಿಗೆ 10 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ.

ಆರೆಂಜ್ ಕ್ಯಾಪ್ ಪಡೆದ ಆಟಗಾರನಿಗೂ 10 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಅತಿ ಹೆಚ್ಚು ವಿಕೆಟ್ ಪಡೆದ ವ್ಯಕ್ತಿಗೆ ಪರ್ಪಲ್ ಬಣ್ಣದ ಕ್ಯಾಪ್ ಜೊತೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ.

ಆವೃತ್ತಿಯಲ್ಲಿ ರನ್ನರ್ ಅಪ್ ತಂಡಕ್ಕೆ 12.5 ಕೋಟಿ ರೂಪಾಯಿ ನೀಡಲಾಗುತ್ತದೆ.

ಕೊನೆಯದಾಗಿ ವಿಜೇತ ತಂಡಕ್ಕೆ 20 ಕೋಟಿ ರೂಪಾಯಿ ನೀಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...