alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಸ್ಕೆಟ್ ಬಾಲ್ ಪಂದ್ಯದಲ್ಲಿ ಮಿಂಚಿದ ಪ್ರಿಯಾಂಕಾ ಪುತ್ರಿ

03th_priyanka-c_03_2721701e

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ವಾದ್ರಾ ಅವರಿಗೆ ರಾಜಕೀಯ ಪ್ರವೇಶಿಸಲು ಆನೇಕ ಬಾರಿ ಒತ್ತಡ ಬಂದಿದ್ದರೂ ಅವರು ಈ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸಹೋದರ ರಾಹುಲ್ ಹಾಗೂ ತಾಯಿ ಸೋನಿಯಾರ ಲೋಕಸಭಾ ಕ್ಷೇತ್ರಗಳಿಗೆ ಪ್ರಿಯಾಂಕಾ ಆಗಾಗ ಭೇಟಿ ನೀಡುತ್ತಿರುತ್ತಾರೆ.

ಇದರ ಜೊತೆ ಜೊತೆಗೆ ತಮ್ಮ ಪುತ್ರಿ ಮರಿಯಾ ವಾದ್ರಾರ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗೂ ಪ್ರಿಯಾಂಕಾ ವಾದ್ರಾ ಸದಾ ಪ್ರೋತ್ಸಾಹಿಸುತ್ತಾರೆ. ಮರಿಯಾ ವಾದ್ರಾ ಸದ್ಯ ಹರಿಯಾಣ ಪರ 42 ನೇ ಸಬ್ ಜೂನಿಯರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಪುದುಚೇರಿಯಲ್ಲಿ ಈ ಪಂದ್ಯಾವಳಿ ನಡೆಯುತ್ತಿದ್ದು, ಪುತ್ರಿಯ ಆಟ ನೋಡಲು ಪ್ರಿಯಾಂಕಾ ಕೂಡಾ ಆಗಮಿಸಿದ್ದಾರೆ.

ಈ ಕಾರಣಕ್ಕಾಗಿ ಪ್ರಿಯಾಂಕಾ ವಾದ್ರಾ ಹಾಗೂ ಮರಿಯಾ ವಾದ್ರಾ ತಂಗಿರುವ ಹೋಟೆಲ್ ಬಳಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಮರಿಯಾ ವಾದ್ರಾ ಮತ್ತವರ ತಂಡ ತಮಿಳುನಾಡು ವಿರುದ್ದ ಮೊದಲ ಪಂದ್ಯವನ್ನಾಡಿದ್ದು, ತಮಿಳುನಾಡು ವಿರುದ್ದ ಹರಿಯಾಣ ಪರಾಭವಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹರಿಯಾಣ ತಂಡದ ಕೋಚ್, ಮೂರು ದಿನಗಳ ಕಾಲ ರೈಲು ಪ್ರಯಾಣದಿಂದ ಆಟಗಾರ್ತಿಯರು ಬಳಲಿದ್ದು, ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...