alex Certify
ಕನ್ನಡ ದುನಿಯಾ       Mobile App
       

Kannada Duniya

ಗೇಲ್ ಆಟಕ್ಕೆ ಈ ರೀತಿಯಿತ್ತು ಪ್ರೀತಿ ಜಿಂಟಾ ರಿಯಾಕ್ಷನ್

ಐಪಿಎಲ್ ಬಿಡ್ಡಿಂಗ್ ವೇಳೆ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ರನ್ನು ಯಾವ ಫ್ರಾಂಚೈಸಿಯೂ ಖರೀದಿಸಲು ಮುಂದಾಗಿರಲಿಲ್ಲ. ಆಗ ಕ್ರಿಸ್ ಗೇಲ್ ಮೇಲೆ ಮನಸ್ಸು ಮಾಡಿದ್ದು ಕಿಂಗ್ಸ್ ಇಲವೆನ್ ಪಂಜಾಬ್ ನ ಸಹ ಮಾಲೀಕೆ ಪ್ರೀತಿ ಜಿಂಟಾ. ಭಾನುವಾರ ನಡೆದ ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಗೇಲ್ ಅಬ್ಬರಿಸಿದ್ದಾರೆ. ಗೇಲ್ ದೈತ್ಯ ರೂಪದಲ್ಲಿ ವಾಪಸ್ ಬಂದಿದ್ದು ಬೇರೆ ತಂಡಗಳಿಗೆ ನಡುಕ ಹುಟ್ಟಿಸಿದ್ದಂತೂ ಸತ್ಯ.

ಗೇಲ್ ಸಿಕ್ಸರ್ ನೋಡಿ ಪ್ರೀತಿ ಆಶ್ಚರ್ಯಕ್ಕೊಳಗಾಗಿದ್ದರು. ಇನ್ನು ಪತಿ ತಂಡಕ್ಕೆ ಪ್ರೋತ್ಸಾಹ ನೀಡಲು ಬಂದಿದ್ದ ಸಾಕ್ಷಿ ಧೋನಿ ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದರು. ಗೇಲ್ 91 ಮೀಟರ್ ಉದ್ದದ ಸಿಕ್ಸರ್ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು.

ಬಿಡ್ಡಿಂಗ್ ವೇಳೆ ಎರಡು ಹರಾಜಿನಲ್ಲೂ ಗೇಲ್ ಖರೀದಿಗೆ ಯಾರೂ ಆಸಕ್ತಿ ತೋರಿರಲಿಲ್ಲ. ಮೂರನೇ ಹರಾಜಿನಲ್ಲಿ ಪ್ರೀತಿ 2 ಕೋಟಿ ರೂಪಾಯಿಗೆ ಗೇಲ್ ಖರೀದಿಸುವ ಮನಸ್ಸು ಮಾಡಿದ್ದರು. ಗೇಲ್ ತಂಡಕ್ಕೆ ತೆಗೆದುಕೊಂಡ ಪ್ರೀತಿ ತಪ್ಪು ಮಾಡಿದ್ದಾರೆ ಎಂದು ಅನೇಕರು ಗೊಣಗಿಕೊಂಡಿದ್ದರು. ಫಾರ್ಮ್ ನಲ್ಲಿಲ್ಲದ ಗೇಲ್ ಏನು ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರ ಮುಂದಿತ್ತು.

ಭಾನುವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಓಪ್ನಿಂಗ್ ಬ್ಯಾಟ್ಸ್ಮೆನ್ ಆಗಿ ಬಂದ ಗೇಲ್ ನಾನು ವಾಪಸ್ ಆಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ. ಗೇಲ್ ಆಟವನ್ನು ಪ್ರೀತಿಯೊಂದೇ ಅಲ್ಲ ಕೆ.ಎಲ್. ರಾಹುಲ್ ಹಾಡಿ ಹೊಗಳಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಶಕ್ತಿ ಗೇಲ್ ಗಿದೆ. ಅದನ್ನು ಮಾಡಿ ತೋರಿಸಿದ್ದಾರೆ. ಇದು ಪಂಜಾಬ್ ತಂಡಕ್ಕೆ ಖುಷಿ ವಿಷ್ಯವಾದ್ರೆ ಬೇರೆಯವರಿಗೆ ಭಯ ಹುಟ್ಟಿಸುವ ಸಂಗತಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...