alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ದೇವರನ್ನೇ ಓವರ್ ಟೇಕ್ ಮಾಡಲು ಹೊರಟವನೀತ

ಈ ಯುವ ಕ್ರಿಕೆಟಿಗನ ಹೆಸರು ಪೃಥ್ವಿ ಶಾ. ವಯಸ್ಸು 18 ವರ್ಷ 8 ದಿನ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಹಿಂದಿಕ್ಕಲು ರೆಡಿಯಾಗಿದ್ದಾನೆ ಈ ಡ್ಯಾಷಿಂಗ್ ಓಪನರ್.

2016 ರಲ್ಲಿ ರಣಜಿ ಕ್ರಿಕೆಟ್ ಮೂಲಕ ದೇಶಿ ಕ್ರಿಕೆಟ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಪೃಥ್ವಿ ಶಾ, 7 ಪಂದ್ಯ 13 ಇನ್ನಿಂಗ್ಸ್ ಗಳಿಂದ 5 ಪ್ರಥಮ ದರ್ಜೆ ಶತಕ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ 18 ನೇ ವಯಸ್ಸಿನಲ್ಲಿ 7 ಶತಕಗಳನ್ನು ಗಳಿಸಿದ್ದರು. ಇನ್ನು 2 ಶತಕ ಗಳಿಸಿದಲ್ಲಿ ಪೃಥ್ವಿ, ಸಚಿನ್ ದಾಖಲೆಯೊಂದನ್ನು ಹಿಂದಿಕ್ಕಲಿದ್ದಾರೆ.

ಮುಂಬೈ ತಂಡದ ಡ್ಯಾಷಿಂಗ್ ಓಪನರ್ ಆಗಿರುವ ಪೃಥ್ವಿ 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 873 ರನ್ ಗಳಿಸಿದ್ದಾರೆ. ಒಡಿಶಾ ವಿರುದ್ಧದ ಪಂದ್ಯದಲ್ಲಿ 153 ಎಸೆತಗಳಲ್ಲಿ 105 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು, ಆಂಧ್ರ ಮತ್ತು ತಮಿಳುನಾಡು ವಿರುದ್ಧದ ಪಂದ್ಯಗಳಲ್ಲಿ ಭರ್ಜರಿ ಶತಕ ಗಳಿಸಿ ಗಮನ ಸೆಳೆದಿದ್ದಾರೆ.

ದೇಶಿ ಕ್ರಿಕೆಟ್ ನಲ್ಲಿ ಪೃಥ್ವಿ ಮಿಂಚು ಹರಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವನ್ ತಂಡವನ್ನು ಪ್ರತಿನಿಧಿಸಿದ್ದರು. ದೇಶಿ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಪೃಥ್ವಿ ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...