alex Certify
ಕನ್ನಡ ದುನಿಯಾ       Mobile App
       

Kannada Duniya

ನಂ. 1 ಜೋಡಿ ಬೇರೆಯಾಗಿದ್ದೇಕೆ..?

SANIA MARTINAಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರೂ ಜೊತೆಯಾಗಿ ಮೂರು ಗ್ರಾಂಡ್ ಸ್ಲಾಮ್ ಸೇರಿದಂತೆ 14 ಟೈಟಲ್ ಗಳನ್ನು ಗೆದ್ದಿದ್ದಾರೆ.

ಈ ಜೋಡಿ ಮತ್ತಷ್ಟು ಪ್ರಶಸ್ತಿ ಗೆದ್ದೇ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಕೂಡ ಟೆನಿಸ್ ಪ್ರಿಯರಲ್ಲಿತ್ತು. ಆದ್ರೆ ಕೇವಲ 16 ತಿಂಗಳುಗಳಲ್ಲಿ ಇವರ ಪಾಲುದಾರಿಕೆ ಮುರಿದು ಬಿದ್ದಿದೆ. ಇದಕ್ಕೆ ಕಾರಣವೇನು ಅನ್ನೋ ಪ್ರಶ್ನೆಗೆ ಈಗ ಮಾರ್ಟಿನಾ ಹಿಂಗಿಸ್ ಅವರೇ ಉತ್ತರ ಕೊಟ್ಟಿದ್ದಾರೆ.

2015 ರ ಆರಂಭದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಸಾನಿಯಾ ಹಾಗೂ ಹಿಂಗಿಸ್ ತಮ್ಮದಾಗಿಸಿಕೊಂಡಿದ್ರು. ಆದ್ರೆ ಅದಾದ್ಮೇಲೆ ಆಡಿದ 3 ಸರಣಿಗಳಲ್ಲಿ ಇವರು ಗೆದ್ದಿದ್ದು ಒಂದನ್ನು ಮಾತ್ರ. ವಿಂಬಲ್ಡನ್ ನಲ್ಲೂ ಸೋಲು ಎದುರಾಗಿತ್ತು.

ಕೆಟ್ಟ ಫಲಿತಾಂಶಗಳು ಎದುರಾಗುತ್ತಿರುವುದರಿಂದ ಅಭಿಮಾನಿಗಳಿಗೆ ನಿರಾಸೆ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಸಾನಿಯಾ ಮತ್ತು ಹಿಂಗಿಸ್ ಬೇರೆ ಬೇರೆಯಾಗಿ ಆಡಲು ನಿರ್ಧರಿಸಿದ್ದಾರಂತೆ. ಆದ್ರೆ ತಮ್ಮಿಬ್ಬರ ಸ್ನೇಹ ಮೊದಲಿನಂತೆಯೇ ಇದೆ ಅಂತಾ ಖುದ್ದು ಮಾರ್ಟಿನಾ ಹಿಂಗಿಸ್ ಸಾಮಾಜಿಕ ತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...