alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜೇಂದರ್ ಸಿಂಗ್ ವಿರುದ್ಧ ದಾಖಲಾಯ್ತು ದೂರು

vijender singhಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಶನಿವಾರಂದು ನಡೆದ ವೃತ್ತಿಪರ ಬಾಕ್ಸಿಂಗ್ ನ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಯ್ಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಮಧ್ಯೆ ಪಂದ್ಯಾವಳಿ ವೇಳೆ ವಿಜೇಂದರ್ ಸಿಂಗ್, ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದಾರೆಂದು ಆರೋಪಿಸಿ ದೆಹಲಿಯ ವಸುಂಧರಾ ಎನ್ ಕ್ಲೇವ್ ನಿವಾಸಿ ಉಲ್ಲಾಸ್ ಎಂಬುವರು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತ್ಯಾಗರಾಜ ಸ್ಟೇಡಿಯಂ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ವಿಜೇಂದರ್ ಸಿಂಗ್ 90-92,90-92 ಮತ್ತು 100-90 ರಿಂದ ಕೆರ್ರಿ ಹೋಪ್ ರನ್ನು ಮಣಿಸಿದ್ದರು. ಪಂದ್ಯದ ವೇಳೆ ವಿಜೇಂದರ್ ಸಿಂಗ್ ಶಾರ್ಟ್ಸ್ ಧರಿಸಿದ್ದು, ಅದರ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರವಿತ್ತೆಂದು ಉಲ್ಲಾಸ್ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...