alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಪಿ.ಎಲ್.ನಲ್ಲೂ ನಡೀತಾ ಸ್ಪಾಟ್ ಫಿಕ್ಸಿಂಗ್..?

ipl-bet

ಕಾನ್ಪುರ್: ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ ನಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಗುಜರಾತ್ ಲಯನ್ಸ್ ತಂಡದ ಇಬ್ಬರು ಆಟಗಾರರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕಾನ್ಪುರದಲ್ಲಿ ಬುಧವಾರ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಎರಡೂ ತಂಡಗಳು ಆಟಗಾರರು ತಂಗಿದ್ದ ಹೋಟೆಲ್ ನಲ್ಲಿಯೇ ಮೂವರು ಬುಕ್ಕಿಗಳು ತಂಗಿದ್ದು, ಕಾನ್ಪುರ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ರಮೇಶ್ ನಾರಾಯಣ್ ಶಾ, ರಮೇಶ್ ಕುಮಾರ್ ಹಾಗೂ ವಿಕಾಸ್ ಬಂಧಿತ ಬುಕ್ಕಿಗಳಾಗಿದ್ದು, ಅವರಿಂದ 40.90 ಲಕ್ಷ ರೂ. ಹಾಗೂ 5 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಗುಜರಾತ್ ಲಯನ್ಸ್ ತಂಡದ ಇಬ್ಬರು ಆಟಗಾರರೊಂದಿಗೆ ಈ ಬುಕ್ಕಿಗಳು ಮಾತನಾಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...