alex Certify
ಕನ್ನಡ ದುನಿಯಾ       Mobile App
       

Kannada Duniya

”ಮುಂಬರುವ ಮೂರು ಒಲಂಪಿಕ್ಸ್ ಗಾಗಿ ಕಾರ್ಯಪಡೆ”

modi

ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಲಂಪಿಕ್ಸ್ ಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುಂಬರುವ ಮೂರು ಒಲಂಪಿಕ್ಸ್ ಗಳಿಗೆ ಕ್ರಿಯಾ ಯೋಜನೆ ರೂಪಿಸಲು ಸರ್ಕಾರ ಕಾರ್ಯಪಡೆ ರಚಿಸುವುದಾಗಿ ಅವರು ಹೇಳಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ನರೇಂದ್ರ ಮೋದಿ ಈ ವಿಷಯ ತಿಳಿಸಿದ್ದಾರೆ. ಇನ್ನೈದು ದಿನಗಳಲ್ಲಿ ಕಾರ್ಯಪಡೆ ರಚನೆಯಾಗಲಿದೆ ಎಂದಿದ್ದಾರೆ. ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನವನ್ನು ಸುಧಾರಿಸುವ ಹೊಣೆ ಕಾರ್ಯಪಡೆಯದ್ದು. ಕಾರ್ಯಪಡೆ 2020, 2024 ಮತ್ತು 2028 ರ ಒಲಂಪಿಕ್ಸ್ ಗೆ ಕಾರ್ಯತಂತ್ರ ರೂಪಿಸಲಿದೆ.

ಸ್ಫೋರ್ಟ್ ಸೌಲಭ್ಯಗಳು, ತರಬೇತಿ, ಆಯ್ಕೆ, ಕಾರ್ಯ ವಿಧಾನ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಕಾರ್ಯಪಡೆ ಗಮನ ನೀಡಲಿದೆ. ರಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿರಲಿಲ್ಲ. ಕೇವಲ 2 ಪದಕ ಮಾತ್ರ ಭಾರತದ ಮುಡಿಗೇರಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪಿಎಂ ಮೋದಿ ಈ ಮಹತ್ವದ ಘೋಷಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...