alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ವಿಶ್ವಕಪ್ ಫೈನಲ್ ವೀಕ್ಷಿಸಿದ್ದಾರೆ ಪ್ರಧಾನಿ ಮೋದಿ

New Delhi: Prime Minister Narendra Modi at the release of Vice-President Hamid Ansari’s book ‘Citizen and Society’ at Rashtrapati Bhawan in New Delhi on Friday. PTI Photo by Subhav Shukla(PTI9_23_2016_000085B)

ವಿಶ್ವಕಪ್ ಫೈನಲ್ ನಲ್ಲಿ ಭಾರತದ ವನಿತೆಯರ ವೀರೋಚಿತ ಸೋಲು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಆದ್ರೆ ಆ ಸೋಲಿನಲ್ಲೂ ಭಾರತ ಮಹಿಳಾ ತಂಡ ಗೆಲುವು ತಂದುಕೊಟ್ಟಿದೆ ಅನ್ನೋದು ಹಲವರ ಅಭಿಪ್ರಾಯ. ಸಾಮಾಜಿಕ ತಾಣಗಳಲ್ಲಂತೂ ಪೈನಲ್ ಪ್ರವೇಶಿಸಿದ ಮಹಿಳಾ ತಂಡದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಅದಕ್ಕಿಂತ್ಲೂ ಹೆಚ್ಚಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ಫೈನಲ್ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸಿದ್ದಾರೆ. ಮ್ಯಾಚ್ ನೋಡಿದ ಮೋದಿ ಭಾರತದ ವನಿತೆಯರ ಆಟವನ್ನು ಮೆಚ್ಚಿ ಟ್ವೀಟ್ ಕೂಡ ಮಾಡಿದ್ದಾರೆ. ಭಾರತದ ತಂಡದ ಬಗ್ಗೆ ಅಪಾರ ಹೆಮ್ಮೆಯಿದೆ ಅಂತಾ ಹೇಳಿದ್ದಾರೆ.

ಪಂದ್ಯದ ನಡುವೆ ಕೂಡ ಆಗಾಗ ಮೋದಿ ಟ್ವೀಟ್ ಮಾಡ್ತಾನೇ ಇದ್ರು. ಕೂಲ್ ಆಗಿ ಎಲ್ಲವನ್ನೂ ನಿಭಾಯಿಸುತ್ತಿದ್ದ ನಾಯಕಿ ಮಿಥಾಲಿ ರಾಜ್ ಅವರ ನಡೆಯನ್ನು ಶ್ಲಾಘಿಸಿದ್ರು. ಹರ್ಮನ್ ಪ್ರೀತ್ ಕೌರ್ ಗೆ ಕೂಡ ಮೋದಿ ಶುಭಾಶಯ ಕೋರಿದ್ರು. ಅಷ್ಟೇ ಅಲ್ಲ ಭಾರತ ತಂಡದ ಪ್ರಮುಖ ಬೌಲರ್ ಜೂಲನ್ ಗೋಸ್ವಾಮಿಗೂ ಆಲ್ ದಿ ಬೆಸ್ಟ್ ಹೇಳಿದ್ರು.

ಭಾರತದಲ್ಲಿ ಕ್ರಿಕೆಟ್ ಕ್ರೇಝ್ ಸ್ವಲ್ಪ ಜಾಸ್ತೀನೇ ಇದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿರೋದು ವಿಶೇಷ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸಮಯ ಮಾಡಿಕೊಂಡು ಮೋದಿ ಭಾರತದ ವನಿತೆಯರ ಬ್ಯಾಟಿಂಗ್ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...