alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಕ್ರಿಕೆಟ್ ತಂಡದ ಜೊತೆ ಮೋದಿ ಮಾತುಕತೆ

pm_women-jpg_1024_1501196604_618x347

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ ಶುಭ ಕೋರಿದ್ದಾರೆ. ಮಹಿಳಾ ತಂಡದ ಜೊತೆ ಮನಬಿಚ್ಚಿ ಮಾತನಾಡಿದ ಮೋದಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಮಹಿಳಾ ವಿಶ್ವಕಪ್  ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 9 ರನ್ ಗಳ ಸೋಲು ಕಂಡಿತ್ತು. ಪಂದ್ಯ ಆರಂಭಕ್ಕೂ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟರ್ ನಲ್ಲಿ ಮಹಿಳಾ ತಂಡಕ್ಕೆ ಶುಭ ಕೋರಿದ್ದರು. ಪಂದ್ಯದಲ್ಲಿ ಭಾರತ ತಂಡ ಸೋಲುತ್ತಿದ್ದಂತೆ ತಕ್ಷಣ ಟ್ವೀಟ್ ಮಾಡಿದ್ದರು. ಪಂದ್ಯವನ್ನು ಮೋದಿ ಸಂಪೂರ್ಣವಾಗಿ ವೀಕ್ಷಿಸಿದ್ದರು.

ಮೋದಿ ಭೇಟಿ ಮಾಡಿದ ಮಹಿಳಾ ತಂಡ, ಮೋದಿ ಮಾಡಿದ್ದ ಟ್ವೀಟ್ ಬಗ್ಗೆ ಖುಷಿ ವ್ಯಕ್ತಪಡಿಸಿದೆ. ಪಂದ್ಯಕ್ಕೂ ಮೊದಲು ಮೋದಿ ಮಾಡಿದ ಟ್ವೀಟ್ ಖುಷಿ ಜೊತೆಗೆ ಪ್ರೋತ್ಸಾಹ ನೀಡ್ತು ಎಂದು ಮಹಿಳಾ ತಂಡ ಹೇಳಿದೆ. ಜೊತೆಗೆ ಒತ್ತಡ ಹೇಗೆ ಕಡಿಮೆ ಮಾಡಿಕೊಳ್ತಿರಾ ಎಂಬ ಪ್ರಶ್ನೆಯನ್ನೂ ಮಹಿಳಾ ತಂಡ ಪ್ರಧಾನಿ ಮುಂದಿಟ್ಟಿದೆ. ಇದಕ್ಕೆ ಉತ್ತರ ನೀಡಿದ ಪ್ರಧಾನಿ ಯೋಗದಿಂದ ಎಲ್ಲವೂ ಸಾಧ್ಯ ಎಂದಿದ್ದಾರೆ.

ಹಾಗೆ ಫೈನಲ್ ನಲ್ಲಿ ಭಾರತ ತಂಡ ಸೋಲುಂಡಿಲ್ಲ. ಇದೊಂದು ದೊಡ್ಡ ಗೆಲುವು. ದೇಶದ ಹೆಣ್ಣು ಮಕ್ಕಳು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಇದ್ರಿಂದ ಭಾರತೀಯ ಮಹಿಳೆಯರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಪ್ರೋತ್ಸಾಹ ಸಿಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...