alex Certify
ಕನ್ನಡ ದುನಿಯಾ       Mobile App
       

Kannada Duniya

ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗೆ ಶಾಕ್

serena-williams-angelique-kerber

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿರಾಸೆ ಅನುಭವಿಸಿದ್ದಾರೆ. ಸೆರೆನಾ ಅವರಿಗಿಂತ ಕಡಿಮೆ ಶ್ರೇಯಾಂಕಿತ ಆಟಗಾರ್ತಿ ಜರ್ಮನಿಯ ಏಂಜೆಲಿಕ್ ಕೆರ್ಬರ್ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು 6-4, 3-6, 6-5 ಸೆಟ್ ಗಳ ಅಂತರದಲ್ಲಿ ಸೋಲಿಸಿದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗಳಿಸಿದರು. ಈ ಪಂದ್ಯಕ್ಕಿಂತ ಮೊದಲು ಸೆರೆನಾ ಮತ್ತು ಏಂಜೆಲಿಕ್ ಕೆರ್ಬರ್ ಅವರು 6 ಸಲ ಮುಖಾಮುಖಿಯಾಗಿದ್ದು, 5 ಸಲ ಸೆರೆನಾ ಜಯಗಳಿಸಿದ್ದರೆ, 1 ಸಲ ಮಾತ್ರ ಕೆರ್ಬರ್ ಜಯಗಳಿಸಿದ್ದರು. 34 ವರ್ಷದ ಅಮೆರಿಕ ವನಿತೆ ಸೆರೆನಾ ಗೆಲುವು ಸಾಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಈ ಪಂದ್ಯದಲ್ಲಿ ಸೆರೆನಾ ಗೆಲುವು ಸಾಧಿಸಿದ್ದರೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು 7ನೇ ಬಾರಿಗೆ ಮುಡಿಗೇರಿಸಿಕೊಂಡಂತಾಗುತ್ತಿತ್ತು. ಅಲ್ಲದೇ, ಅವರು ಫೈನಲ್ ಪಂದ್ಯದಲ್ಲಿ ಗೆದ್ದಿದ್ದರೆ 22ನೇ ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಂತೆ ಆಗುತ್ತಿತ್ತು. ಏಂಜೆಲಿಕ್ ಅವರ ಎದುರು ಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದು ನಿರಾಸೆ ಅನುಭವಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...