alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣ ಅಫ್ರಿಕಾ ತಂಡ ಪಿಂಕ್ ಜರ್ಸಿ ಧರಿಸಿದ್ದೇಕೆ ಎಂಬ ಕುತೂಹಲವೇ?ಇಲ್ಲಿದೆ ಉತ್ತರ…!

ಶನಿವಾರದಂದು ಜೋಹಾನ್ಸ್ಬರ್ಗ್ ನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ದದ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ದಕ್ಷಿಣ ಅಫ್ರಿಕಾ ತಂಡ ಮತ್ತೆ ಉತ್ಸಾಹ ಪಡೆದಿದೆ.

ಮಳೆಯಿಂದಾಗಿ ಸ್ಥಗಿತವಾಗಿದ್ದ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮವನ್ನು ಅನುಸರಿಸಲಾಗಿದ್ದು, ದಕ್ಷಿಣ ಆಫ್ರಿಕಾ 5 ವಿಕೆಟ್ ಅಂತರದಿಂದ ಜಯ ಗಳಿಸಿದೆ. 6 ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರರಲ್ಲಿ ಭಾರತ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ಗೆಲುವು ಕಂಡಿದೆ.

ಶನಿವಾರದ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ಆಟಗಾರರು ತಮ್ಮ ಎಂದಿನ ಗ್ರೀನ್ ಜರ್ಸಿ ಬದಲು ಪಿಂಕ್ ಜರ್ಸಿ ಧರಿಸಿದ್ದು, ಕೆಲ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಪ್ರತಿ ವರ್ಷ ಒಂದು ಏಕ ದಿನ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ಆಟಗಾರರು ಪಿಂಕ್ ಜರ್ಸಿ ಧರಿಸಿ ಆಟವಾಡುತ್ತಿದ್ದು, ವಿಶೇಷವೆಂದರೆ ಹೀಗೆ ಪಿಂಕ್ ಜರ್ಸಿ ಧರಿಸಿ ಆಡಿದ ಪಂದ್ಯಗಳಲೆಲ್ಲಾ ದಕ್ಷಿಣ ಅಫ್ರಿಕಾ ತಂಡ ಜಯ ಸಾಧಿಸಿದೆ.

ಅಂದ ಹಾಗೇ ದಕ್ಷಿಣ ಅಫ್ರಿಕಾ ಆಟಗಾರರು ಪಿಂಕ್ ಜರ್ಸಿ ಧರಿಸುವುದು ಒಂದು ಸಾಮಾಜಿಕ ಕಳಕಳಿಯ ಉದ್ದೇಶಕ್ಕಾಗಿ. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶವಾಗಿದ್ದರೆ ಜೊತೆಗೆ ಕ್ಯಾನ್ಸರ್ ವಿರುದ್ದ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಂಸ್ಥೆಯೊಂದಕ್ಕೆ ಹಣ ಸಂಗ್ರಹಿಸುವ ಗುರಿಯನ್ನೂ ಇದು ಹೊಂದಿದೆ. ಕೇವಲ ಆಟಗಾರರು ಮಾತ್ರವಲ್ಲ ದಕ್ಷಿಣ ಅಫ್ರಿಕಾ ಕ್ರಿಕೆಟ್ ಅಭಿಮಾನಿಗಳೂ ಅಂದು ಪಿಂಕ್ ಜರ್ಸಿ ಧರಿಸಿ ಬರುವಂತೆ ಕೋರಲಾಗುತ್ತದೆ.

ಪಿಂಕ್ ಜರ್ಸಿ ಧರಿಸಿ ಆಡಿದ ಪಂದ್ಯದಲ್ಲಿ ಬಾರಿಸುವ ಪ್ರತಿಯೊಂದು ಬೌಂಡರಿಗೂ ಪ್ರಾಯೋಜಕತ್ವ ವಹಿಸಿರುವ ಬಿಡ್ ವೆಸ್ಟ್ ಸಂಸ್ಥೆ 1000 ರ್ಯಾಂಡ್ ನೀಡುತ್ತದೆ. ಹಾಗೇ ಕ್ಯಾಚ್ ಗೆ 10 ಸಾವಿರ ರ್ಯಾಂಡ್, ಫ್ಯಾಮಿಲಿ ಏರಿಯಾ ಕಡೆ ಸಿಕ್ಸರ್ ಬಾರಿಸಿದರೆ 10 ಸಾವಿರ ರ್ಯಾಂಡ್ ನೀಡಲಾಗುತ್ತದೆ. ಒಟ್ಟು 1 ಮಿಲಿಯನ್ ರ್ಯಾಂಡ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಹೀಗಾಗಿ ಪ್ರತಿ ವರ್ಷ ಒಂದು ಏಕ ದಿನ ಪಂದ್ಯದಲ್ಲಿ ಪಿಂಕ್ ಜರ್ಸಿ ಧರಿಸಿ ದಕ್ಷಿಣ ಅಫ್ರಿಕಾ ಆಟಗಾರರು ಆಟವಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...