alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಗೆ ಸಿಕ್ಕಿದೆ ಅಪರೂಪದ ಉಡುಗೊರೆ…!

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ ಆರು ಸಾವಿನ ರನ್ ಗಳಿಸಿದ ಭಾರತದ ಎರಡನೇ ಆಟಗಾರ ಅನ್ನೋ ದಾಖಲೆಯನ್ನ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ವೇಗವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಗಳಿಸಿದ ಒಂಭತ್ತನೇ ಆಟಗಾರರಾಗಿದ್ದಾರೆ.

ಈ ದಾಖಲೆ ಬರೆದ ಭಾರತ ಕ್ರಿಕೆಟ್ ತಂಡದ ನಾಯಕನಿಗೆ ಹೊಟೇಲ್ ಸಿಬ್ಬಂದಿ ಕೂಡ ವಿಶೇಷ ಗೌರವದ ಜೊತೆಗೆ ವಿಶೇಷ ಗಿಫ್ಟ್ ಕೂಡ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡ ತಂಗಿರುವಂತಾ ಹೊಟೇಲ್ ಸಿಬ್ಬಂದಿ, ವಿರಾಟ್ ಗಾಗಿಯೇ ವಿಶೇಷ ಪೇಸ್ಟ್ರಿ ಮತ್ತು ಸ್ಟ್ರಾಬೆರಿಗಳನ್ನ ಉಡುಗೊರೆಯಾಗಿ ನೀಡಿದೆ.

ಹೊಟೇಲ್ ಸಿಬ್ಬಂದಿ ನೀಡಿದ ಅನಿರೀಕ್ಷಿತ ಉಡುಗೊರೆಯಿಂದ ಕೊಹ್ಲಿ ಇನ್ನಷ್ಟು ಖುಷಿಯಾಗಿದ್ದಾರೆ. ಈ ಸಂದರ್ಭವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ವಿರಾಟ್, ಹೊಟೇಲ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...